ಯೂಟ್ಯೂಬ್‌ನಲ್ಲಿ 'ಸ್ವೀಟಿ ನನ್ನ ಜೋಡಿ'; ನಟಿ ರಾಧಿಕಾ ದೂರು

ಬೆಂಗಳೂರು: ನಿರ್ಮಾಪಕರ ಅನುಮತಿ ಪಡೆಯದೇ 'ಸ್ವೀಟಿ ನನ್ನ ಜೋಡಿ' ಸಿನಿಮಾವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ಈ ಸಂಬಂಧ ನಿರ್ಮಾಪಕಿಯೂ ಆಗಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ಉತ್ತರ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
'ಸಿನಿಮಾ ಪೈರಸಿ ಮಾಡಿರುವ ಕಿಡಿಗೇಡಿಗಳ ವಿರುದ್ದ ಕ್ರಮ ಜರುಗಿಸಬೇಕು' ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
‘2013ರಲ್ಲಿ ರಾಧಿಕಾ ಕುಮಾರಸ್ವಾಮಿ ಅವರೇ ‘ಸ್ವೀಟಿ ನನ್ನ ಜೋಡಿ’ ಸಿನಿಮಾ ನಿರ್ಮಿಸಿದ್ದರು. ತಾವೇ ನಟಿಸಿದ್ದರು. ಅದೇ ಸಿನಿಮಾವನ್ನು ನಿರ್ಮಾಪಕರ ಅನುಮತಿ ಪಡೆಯದೇ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.
‘₹3 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಿರುವುದಾಗಿ ರಾಧಿಕಾ ಕುಮಾರಸ್ವಾಮಿ ದೂರಿನಲ್ಲಿ ಹೇಳಿದ್ದಾರೆ. ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.