ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಟ್ಟೇರಿತು ‘ರಾಜ ದೇವ ಸಿಂಧು’

Published : 24 ಸೆಪ್ಟೆಂಬರ್ 2024, 19:22 IST
Last Updated : 24 ಸೆಪ್ಟೆಂಬರ್ 2024, 19:22 IST
ಫಾಲೋ ಮಾಡಿ
Comments

ಫ್ಯಾಂಟಸಿ ಹಾಗೂ ಪ್ರಸಕ್ತ ಕಾಲಮಾನದ ಕಥಾಹಂದರ ಹೊಂದಿರುವ ‘ರಾಜ ದೇವ ಸಿಂಧು’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ದುರ್ಗ ಮೋಹನ್ ನಿರ್ದೇಶನದ ಚಿತ್ರವನ್ನು ಆರ್‌ಎಸ್‌ಪಿ ಪ್ರೊಡಕ್ಷನ್ಸ್ ಮತ್ತು ಚಿನ್ಮಯ್ ಸಿನಿ ಕ್ರಿಯೇಶನ್ಸ್ ನಿರ್ಮಾಣ ಮಾಡುತ್ತಿದೆ.

‘ಇದು ನನ್ನ ನಿರ್ದೇಶನದ ಎರಡನೇ ಸಿನಿಮಾ. ಈ ಚಿತ್ರ ಫ್ಯಾಂಟಸಿ ಹಾಗೂ ಈಗಿನ ಕಾಲಘಟ್ಟದ ಕಾಲ್ಪನಿಕ ಕಥೆಯನ್ನು ಹೊಂದಿರುತ್ತದೆ. ರಾಜರ ಬಗ್ಗೆ ನೆನಪು ಮಾಡಿಕೊಂಡರೆ, ಮೊದಲು ಕೃಷ್ಣದೇವರಾಯ ಕಣ್ಣೆದುರಿಗೆ ಬರುತ್ತಾರೆ. ಅವರು ಮಾಡಿದಂಥ ಸಾಕಷ್ಟು ಸಾಮಾಜಿಕ ಕೆಲಸಗಳು ನೆನಪಾಗುತ್ತವೆ. ಕವಿಗಳಿಗೆ ಆಶ್ರಯ, ಯಾತ್ರಾರ್ಥಿಗಳಿಗೆ ತಂಗುದಾಣಗಳ ನಿರ್ಮಾಣದಂಥ ಅವರ ಹಲವು ಕೆಲಸಗಳನ್ನು ಚಿತ್ರಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಇದೇ ರಾಜ ಡೆಲಿವರಿ ಬಾಯ್ ಆಗಿ ಈಗ ಬಂದಾಗ ಏನೆಲ್ಲ ಆಗುತ್ತದೆ ಎಂಬುದೇ ಕಥೆ. ‘ದೇವರಾಯ’ ಪಟ್ಟಣದಲ್ಲಿ, ಯುವರಾಣಿ ‘ಸಿಂಧುಜ’ ಜೊತೆ ಈ ಕಥೆ ನಡೆಯುತ್ತದೆ’ ಎಂದು ಚಿತ್ರದ ಕುರಿತು ಮಾಹಿತಿ ನೀಡಿದರು ನಿರ್ದೇಶಕರು.

ಭಾರ್ಗವ ಚಿತ್ರದ ನಾಯಕ. ಛವಸಖಿ ತಿಮ್ಮಯ್ಯ, ಸ್ವಾತಿಪ್ರಭು, ಆರಾ ನಾಯಕಿಯರು. ಪ್ರಜ್ವಲ್ ಛಾಯಾಚಿತ್ರಗ್ರಹಣವಿದೆ. ಬೆಂಗಳೂರು, ಮಡಿಕೇರಿ, ಮಂಗಳೂರು ಮೊದಲಾದೆಡೆ ಚಿತ್ರೀಕರಿಸಲು ತಂಡ ಯೋಜನೆ ರೂಪಿಸಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT