ಶುಕ್ರವಾರ, ಮಾರ್ಚ್ 24, 2023
30 °C

RRR ಚಿತ್ರ ಮೆಚ್ಚಿದ ಜೇಮ್ಸ್ ಕ್ಯಾಮರೂನ್: ನಂಬಲಾಗುತ್ತಿಲ್ಲ ಎಂದ ರಾಜಮೌಳಿ

ಐಎಎನ್‍ಎಸ್ Updated:

ಅಕ್ಷರ ಗಾತ್ರ : | |

ಲಾಸ್ ಏಂಜಲಸ್: ಜನಪ್ರಿಯ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು ತಮ್ಮ 'ಆರ್‌ಆರ್‌ಆರ್' ಚಿತ್ರವನ್ನು  10 ನಿಮಿಷಗಳ ಕಾಲ ವಿಶ್ಲೇಷಣೆ ಮಾಡಿರುವುದನ್ನು ನಂಬಲಾಗುತ್ತಿಲ್ಲ ಎಂದು ಎಸ್‌.ಎಸ್.ರಾಜಮೌಳಿ ಸಂತಸ ಹಂಚಿಕೊಂಡಿದ್ದಾರೆ.

 

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜಮೌಳಿ, 'ಟೈಟಾನಿಕ್' ಮತ್ತು 'ಅವತಾರ್' ನಂತಹ ವಿಶ್ವಶ್ರೇಷ್ಠ ಚಲನಚಿತ್ರಗಳನ್ನು ನಿರ್ದೇಶಿಸಿರುವ ಕ್ಯಾಮರೂನ್‌ ಅವರೊಂದಿಗಿರುವ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಒಂದು ಚಿತ್ರದಲ್ಲಿ, ವಿಶ್ವಶ್ರೇಷ್ಠ ನಿರ್ದೇಶಕರಿಬ್ಬರು ಚರ್ಚೆ ನಡೆಸುತ್ತಿದ್ದಾರೆ.  ‘ಶ್ರೇಷ್ಠ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು ಆರ್‌ಆರ್‌ಆರ್‌ ಚಿತ್ರ ವೀಕ್ಷಿಸಿದ್ದಾರೆ ಮತ್ತು ಚಿತ್ರವನ್ನು ಮೆಚ್ಚಿಕೊಂಡರು. ತಮ್ಮ ಪತ್ನಿ ಸುಜಿಗೆ ಕೂಡ ಚಿತ್ರ ನೋಡಲು ಶಿಫಾರಸು ಮಾಡಿದರು. ನೀವು ಹೇಳಿದಂತೆ ನಾನು ಈಗ ವಿಶ್ವದ ಅತಿ ಎತ್ತರದ ಜಾಗದಲ್ಲಿರುವೆ. ನಮಗಾಗಿ ಸಮಯ ನೀಡಿದ ಇಬ್ಬರಿಗೂ ಧನ್ಯವಾದಗಳು’ಎಂದು ಟ್ವೀಟ್‌ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು