ಶುಕ್ರವಾರ, ಮಾರ್ಚ್ 31, 2023
32 °C

ಮಾರ್ಚ್‌ನಲ್ಲಿ ತೆರೆಗೆ ಬರಲಿದೆ ತೆಲುಗು ನಟ ನಾನಿ ‘ದಸರಾ’

ಪಿಟಿಐ Updated:

ಅಕ್ಷರ ಗಾತ್ರ : | |

ಹೈದ್ರಾಬಾದ್‌: ತೆಲುಗು ನಟ ನಾನಿ–ಕೀರ್ತಿ ಸುರೇಶ್ ಅಭಿನಯದ ‘ದಸರಾ’ಚಿತ್ರದ ಟೀಸರ್‌ ಬಿಡುಗಡೆಗೊಂಡಿದೆ. ಮಾರ್ಚ್ 30ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಭರ್ಜರಿ ಆ್ಯಕ್ಷನ್‌ ಹೊಂದಿರುವ ಚಿತ್ರದ ಕುರಿತು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. 

ನಾನಿ ಒರಟಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತೆಲುಗಿನಲ್ಲಿ ಟೀಸರ್‌ ಬಿಡುಗಡೆಗೊಳಿಸಿದ ನಿರ್ದೇಶಕ ಎಸ್​ಎಸ್​ ರಾಜಮೌಳಿ   ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜಮೌಳಿ, ‘ದಸರಾ ಟೀಸರ್​ನಲ್ಲಿನ ದೃಶ್ಯಗಳು ಉತ್ತಮವಾಗಿವೆ. ಈ ಪಾತ್ರಕ್ಕಾಗಿ ನಾನಿ ಮಾಡಿಕೊಂಡಿರುವ ಬದಲಾವಣೆ ಮೆಚ್ಚಲೇಬೇಕು. ಹೊಸ ನಿರ್ದೇಶಕರೊಬ್ಬರು ಹೀಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದನ್ನು ನೋಡಲು ಸಂತಸವಾಗುತ್ತದೆ. ನಿರ್ದೇಶಕ ಶ್ರೀಕಾಂತ್ ಒಡೆಲಾ ಹಾಗೂ ಇಡೀ ತಂಡಕ್ಕೆ ಶುಭವಾಗಲಿ’ ಎಂದಿದ್ದಾರೆ.

ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ‘ದಸರಾ’ ಟೀಸರ್​ ಬಿಡುಗಡೆಗೊಳಿಸಿದ್ದಾರೆ. ಹಿಂದಿಯಲ್ಲಿ ಶಾಹಿದ್ ಕಪೂರ್, ತಮಿಳಿನಲ್ಲಿ​ ಧನುಷ್, ಮಲಯಾಳದಲ್ಲಿ ದುಲ್ಕರ್ ಸಲ್ಮಾನ್ ಟೀಸರ್‌ ಬಿಡುಗಡೆಗೊಳಿಸಿ ನ್ಯಾಚುರಲ್ ಸ್ಟಾರ್‌ಗೆ ಶುಭ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು