ಭಾನುವಾರ, ಏಪ್ರಿಲ್ 18, 2021
33 °C

ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ನಿರ್ಧಾರ: ರಾಜೇಂದ್ರ ಸಿಂಗ್ ಬಾಬು ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರ’ ಎಂದು ನಿರ್ಮಾಪಕ, ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

‘ಕಳೆದ 40 ವರ್ಷದಿಂದ ಹೆಸರಘಟ್ಟ, ರಾಮನಗರ ಅಲ್ಲಿ, ಇಲ್ಲಿ ಚಿತ್ರನಗರಿ ತಲೆಯೆತ್ತಲಿದೆ ಎಂಬ ಸುದ್ದಿಗಳನ್ನಷ್ಟೇ ಕೇಳುತ್ತಾ ಬಂದಿದ್ದೆವು. ಇದೀಗ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸೂಚಿಸಿರುವುದು ಖುಷಿಯಾಗಿದೆ. ಇದರ ಅನುಷ್ಠಾನಕ್ಕೆ ಕಾರಣೀಕರ್ತರಾದವರಿಗೆ ನನ್ನ ಧನ್ಯವಾದ. ಮೈಸೂರಿಗೆ 85 ವರ್ಷಗಳ ಸಿನಿಮಾ ಇತಿಹಾಸವಿದೆ. ಇಂಥಹ ಇತಿಹಾಸ ಇರುವ ನಗರಕ್ಕೆ ಚಿತ್ರನಗರಿ ಎನ್ನುವ ಮತ್ತೊಂದು ಕಿರೀಟ ಮುಡಿಗೇರಿದ್ದು, ಚಿತ್ರೋದ್ಯಮದ ಪ್ರಗತಿಗೆ ಇದು ದಾರಿಯಾಗಲಿದೆ’ ಎಂದಿದ್ದಾರೆ. 

ಮೈಸೂರಿನ ಪ್ರವಾಸೋದ್ಯಮಕ್ಕೂ ಇದರಿಂದ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಎಂಜಿಆರ್, ರಾಜ್ ಕಪೂರ್, ಶಾಂತಾ ರಾಮ್ ಎಲ್ಲರೂ ಮೈಸೂರಿನಲ್ಲಿಯೇ ಇರುತ್ತಿದ್ದರು. ಮೈಸೂರಿನ ಕೇವಲ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 257 ಲೋಕೇಷನ್‌ಗಳು ಇವೆ. 16 ಅರಮನೆಗಳು, 5 ನದಿಗಳಿವೆ.

ಹೀಗಾಗಿಯೇ ವಿಷ್ಣುವರ್ಧನ್ ಮತ್ತು ರಜನಿಕಾಂತ್ ಅವರಿಗೂ ಮೈಸೂರು ಅಂದ್ರೆ ಪಂಚಪ್ರಾಣ. ಇದೀಗ ಸರ್ಕಾರ ಇಂತಹ ಐತಿಹ್ಯವಿರುವ ನಗರಕ್ಕೆ ಚಿತ್ರನಗರಿ ನೀಡುತ್ತಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು