ಶನಿವಾರ, ಮೇ 28, 2022
31 °C

ರಾಜ್‌ಕುಮಾರ್ ರಾವ್–ಪತ್ರಲೇಖಾ ಮದುವೆ: ಗಮನ ಸೆಳೆದ ಸವ್ಯಸಾಚಿ ವಸ್ತ್ರವಿನ್ಯಾಸ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟ ರಾಜಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ಅವರು ಕಳೆದ ಸೋಮವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ಜೋಡಿ ಚಂಡೀಗಡದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.

ಬಾಲಿವುಡ್‌ನ ಈ ಹೊಸ ಜೋಡಿಗೆ ಚಿತ್ರರಂಗದ ಅನೇಕ ಗಣ್ಯರು, ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ  ರಾಜ್‌ಕುಮಾರ್ ಹಾಗೂ ಪತ್ರಲೇಖಾ ಮದುವೆ ಫೋಟೊಗಳು ವೈರಲ್ ಕೂಡ ಆಗಿವೆ. ಖ್ಯಾತ ಫ್ಯಾಷನ್ ಡಿಸೈನರ್ ಸವ್ಯಸಾಚಿ (ಸವ್ಯಸಾಚಿ ಮುಖರ್ಜಿ) ಅವರು ಮಾಡಿರುವ ವಸ್ತ್ರ ವಿನ್ಯಾಸ ಗಮನ ಸೆಳೆಯುತ್ತಿದೆ.

ಸವ್ಯಸಾಚಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ರಾಜ್‌ಕುಮಾರ್ ರಾವ್ ಹಾಗೂ ಪತ್ರಲೇಖಾ ಜೋಡಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದ ರಾಜಕುಮಾರ್ ರಾವ್ ಅವರು, ‘11 ವರ್ಷಗಳ ಪ್ರೀತಿ, ಪ್ರೇಮ, ಸ್ನೇಹ, ನನ್ನ ಸಂತಸ ಸರ್ವಸ್ವವೂ ಆಗಿದ್ದ ಆತ್ಮಸಂಗಾತಿಯನ್ನು ನನ್ನ ಆಪ್ತ ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ಇಂದು ವಿವಾಹವಾಗಿದ್ದೇನೆ. ನಿನ್ನ ಪತಿ ಎಂದು ಕರೆಸಿಕೊಳ್ಳುವುದಕ್ಕಿಂತ ನನಗೆ ಬೇರೇನೂ ದೊಡ್ಡದಿಲ್ಲ ಪತ್ರಲೇಖಾ’ ಎಂದು ಬರೆದುಕೊಂಡಿದ್ದರು.

ನನ್ನ ಬಾಯ್‌ಫ್ರೆಂಡ್, ನನ್ನ ತಪ್ಪುಗಳಲ್ಲಿ ಪಾಲುದಾರ, ನನ್ನ ಕುಟುಂಬ, ನನ್ನ ಆತ್ಮಸಂಗಾತಿ ಸೇರಿ ನನ್ನ ಜೀವನದಲ್ಲಿ ಎಲ್ಲವೂ ಆಗಿದ್ದವರನ್ನು ವಿವಾಹವಾಗಿದ್ದೇನೆ. 11 ವರ್ಷಗಳಿಂದ ನನ್ನ ಆಪ್ತ ಸ್ನೇಹಿತನಾಗಿದ್ದ ನಿನ್ನ ಪತ್ನಿ ಎಂದು ಕರೆಸಿಕೊಳ್ಳುವುದಕ್ಕಿಂತ ದೊಡ್ಡದೇನೂ ಇಲ್ಲ ಎಂದು ಪತ್ರಲೇಖಾ ಬರೆದುಕೊಂಡಿದ್ದರು.

ತಮ್ಮ ಮತ್ತು ರಾಜ ಕುಮಾರ್ ರಾವ್ ಅವರ ಪ್ರೇಮ ಸಂಬಂಧದ ಬಗ್ಗೆ ಹ್ಯೂಮನ್ಸ್ ಅಫ್ ಬಾಂಬೆಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಪತ್ರಲೇಖಾ, ಅದೊಂದು ಮ್ಯಾಜಿಕ್, ಕೆಲಸದ ಬಗ್ಗೆ ಅವರಿಗಿರುವ ಗೀಳು ಅತ್ಯಂತ ಶಕ್ತಿಯುತವಾದದ್ದು. ನಾವು ನಮ್ಮ ಕೆಲಸದ ಬಗ್ಗೆ ಹೆಚ್ಚಾಗಿ ಮಾತನಾಡುತ್ತೇವೆ. ಕಷ್ಟದ ದಿನಗಳಲ್ಲೂ ಅವರ ಜೊತೆಗಿದ್ದೆ. ಅವರು ಎಂತಹ ಕಠಿಣ ಸಂದರ್ಭದಲ್ಲೂ ಬೆನ್ನು ತೋರಿದವರಲ್ಲ ಎಂದು ಹೇಳಿಕೊಂಡಿದ್ದರು.

‘ಲವ್ ಸೆಕ್ಸ್ ದೋಖಾ’ಚಿತ್ರದ ಮೂಲಕ ರಾಜಕುಮಾರ್ ರಾವ್ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. 2013ರಲ್ಲಿ ತೆರೆ ಕಂಡ ‘ಕಾಯ್ ಪೊ ಚೆ’ ಅವರಿಗೆ ಹೆಸರು ತಂದುಕೊಟ್ಟಿತ್ತು.

ಇದನ್ನೂ ಓದಿ: ಲೈಗರ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ ಬಾಕ್ಸಿಂಗ್ ದಂತಕತೆ ಮೈಕ್ ಟೈಸನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು