ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಜಾಹ್ನವಿ ಅಭಿನಯದ ‘ಮಿಸ್ಟರ್‌ ಅಂಡ್‌ ಮಿಸಸ್‌ ಮಹಿ’ ಚಿತ್ರ ಮೇ 31ಕ್ಕೆ ತೆರೆಗೆ

Published 12 ಮೇ 2024, 13:18 IST
Last Updated 12 ಮೇ 2024, 13:18 IST
ಅಕ್ಷರ ಗಾತ್ರ

ಮುಂಬೈ: ‌ನಟ ರಾಜ್‌ಕುಮಾರ್‌ ರಾವ್‌ ಹಾಗೂ ನಟಿ ಜಾಹ್ನವಿ ಕಪೂರ್‌ ಅಭಿನಯದ ‘ಮಿಸ್ಟರ್‌ ಅಂಡ್‌ ಮಿಸಸ್‌ ಮಹಿ’ ಚಿತ್ರವು ಇದೇ ಮೇ 31ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

‘ಎಕ್ಸ್‌’ನಲ್ಲಿ ‘ಮಿಸ್ಟರ್‌ ಅಂಡ್‌ ಮಿಸಸ್‌ ಮಹಿ’ ಚಿತ್ರದ ಟ್ರೇಲರ್‌ ಹಂಚಿಕೊಂಡಿರುವ ಧರ್ಮಾ ಪ್ರೊಡಕ್ಷನ್ಸ್, ‘ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಎದುರಾಗುವ ಎಲ್ಲ ಆತಂಕಗಳನ್ನು ಮೆಟ್ಟಿ ನಿಲ್ಲುವತ್ತ ಈ ಕಥೆ ಬೆಳಕು ಚೆಲ್ಲಲಿದೆ’ ಎಂದು ಬರೆದುಕೊಂಡಿದೆ.

ಗುಂಜನ್ ಸಕ್ಸೇನಾ ಸಿನಿಮಾ ಖ್ಯಾತಿಯ ಶರಣ್‌ ಶರ್ಮಾ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರವು ಕ್ರಿಕೆಟ್‌ ಕ್ಷೇತ್ರದ ಕಥಾಹಂದರ ಹೊಂದಿದೆ.

‘ರೂಹಿ ಅಫ್ಜಾ’ ಸಿನಿಮಾದ ಬಳಿಕ ಇದೀಗ ರಾಜ್‌ಕುಮಾರ್‌ ಮತ್ತು ಜಾಹ್ನವಿ ಕಪೂರ್ ಎರಡನೇ ಬಾರಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವನ್ನು ಕರಣ್ ಜೋಹರ್, ಜೀ ಸ್ಟುಡಿಯೋಸ್, ಹಿರೂ ಯಶ್ ಜೋಹರ್ ಮತ್ತು ಅಪೂರ್ವ ಮೆಹ್ತಾ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT