ಮಂಗಳವಾರ, ಸೆಪ್ಟೆಂಬರ್ 28, 2021
24 °C

‘ಸಪ್ತ ಸಾಗರದಾಚೆ ಎಲ್ಲೋ’ ಮೊದಲ ಹಂತದ ಚಿತ್ರೀಕರಣ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೇಮಂತ್‌ ಎಂ.ರಾವ್‌ ನಿರ್ದೇಶನದ, ನಟ ರಕ್ಷಿತ್‌ ಶೆಟ್ಟಿ ಅಭಿನಯಿಸುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. 

ಈ ಕುರಿತು ಟ್ವೀಟ್‌ನಲ್ಲಿ ಮಾಹಿತಿ ನೀಡಿರುವ ರಕ್ಷಿತ್‌ ಶೆಟ್ಟಿ ಅವರು, ‘ಸಪ್ತ ಸಾಗರದಾಚೆ ಎಲ್ಲೋ..ಒಂದು ಅತ್ಯುತ್ತಮ ಕಥೆ, ಅದ್ಭುತ ಚಿತ್ರತಂಡ, ಎಲ್ಲರಲ್ಲೂ ಇಮ್ಮಡಿ ಉತ್ಸಾಹ..ಬೇರೇನು ಬೇಕು. ಚಿತ್ರದ ಮೊದಲ ಹಂತದ 21 ದಿನಗಳ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ’ ಎಂದಿದ್ದಾರೆ. ಜೊತೆಗೆ ಮೊದಲ ಹಂತದ ಚಿತ್ರೀಕರಣದ ಕೆಲ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದಾರೆ.

‘ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ, 21 ದಿನಕ್ಕೇ ಮೊದಲ ಹಂತದ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದೇವೆ. ಸುರಕ್ಷಿತವಾದ ವಾತಾವರಣ ನಿರ್ಮಾಣವಾದ ಬಳಿಕ ಮತ್ತು ಚಿತ್ರತಂಡದ ಎಲ್ಲ ಸದಸ್ಯರು ಕೋವಿಡ್‌ ಲಸಿಕೆ ಪಡೆದ ಬಳಿಕ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸುವುದಾಗಿ’ ನಿರ್ದೇಶಕ ಹೇಮಂತ್‌ ರಾವ್‌ ತಿಳಿಸಿದ್ದಾರೆ.

ಮೇ 15 ಒಳಗೆ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಜೂನ್‌.15ರಿಂದ ಎರಡನೇ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ಈ ಹಿಂದೆ ನಿರ್ಧರಿಸಿತ್ತು. ಜುಲೈ ಅಂತ್ಯಕ್ಕೆ ಚಿತ್ರೀಕರಣ ಮುಗಿಸಿ, ಡಿಸೆಂಬರ್‌ ಕೊನೆಯ ಶುಕ್ರವಾರ ಚಿತ್ರ ಬಿಡುಗಡೆಗೆ ತಂಡವು ನಿರ್ಧರಿಸಿದೆ. ಚಿತ್ರದ ಮೊದಲಾರ್ಧದ ಪಾತ್ರಕ್ಕಾಗಿ ನಟ ರಕ್ಷಿತ್‌ 10–15 ಕೆ.ಜಿ. ತೂಕ ಇಳಿಸಿಕೊಂಡಿದ್ದು, ನಂತರದ ಪಾತ್ರಕ್ಕೆ ದಪ್ಪ ಆಗಬೇಕಾಗಿದೆ. ಇದಕ್ಕಾಗಿ ಎರಡನೇ ಹಂತದ ಚಿತ್ರೀಕರಣಕ್ಕೆ ತಿಂಗಳ ಅಂತರ ಇಟ್ಟುಕೊಳ್ಳಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು