ಭಾನುವಾರ, ಜನವರಿ 19, 2020
23 °C

‘ಇಂಡಿಯನ್‌ 2’ ರಕುಲ್‌ ನಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ರಕುಲ್‌ ಪ್ರೀತ್‌ ಸಿಂಗ್‌ ಬಹುಭಾಷೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಟಿ ಈಗ ಕಮಲಹಾಸನ್‌ ನಟನೆಯ ‘ಇಂಡಿಯನ್‌ 2 ಸಿನಿಮಾದಲ್ಲಿ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇದೇ ಮೊದಲ ಬಾರಿಗೆ ರಕುಲ್‌, ಕಮಲಹಾಸನ್‌ ಜೊತೆ ನಟಿಸಿದ್ದಾರೆ. ಶಂಕರ್‌ ನಿರ್ದೇಶನದ ಈ ಚಿತ್ರದಲ್ಲಿ ತಾವು ನಟಿಸುತ್ತಿರುವ ಬಗ್ಗೆ ರಕುಲ್‌ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದು, ‘ಕಮಲ ಹಾಸನ್‌ ಅದ್ಭುತ ನಟ’ ಎಂದು ಕೊಂಡಾಡಿದ್ದಾರೆ.

‘ಭಾರತೀಯ ಸಿನಿಮಾದಲ್ಲಿ ತುಂಬ ಅನುಭವಸ್ಥ ನಟ ಕಮಲ ಹಾಸನ್‌. ಎಲ್ಲಾ ಬಗೆ ಪಾತ್ರಗಳಲ್ಲಿ ಅವರು ಲೀಲಾಜಾಲವಾಗಿ ನಟಿಸುತ್ತಾರೆ. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ಈ ಜನ್ಮಕ್ಕೆ ಸಾಕು. ಅವರಿಂದ ತುಂಬ ಕಲಿತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ಸಿದ್ಧಾರ್ಥ್‌ನ ಪ್ರೇಮಿಪಾತ್ರದಲ್ಲಿ ರಕುಲ್‌ ನಟಿಸಿದ್ದಾರೆ ಎನ್ನಲಾಗಿದೆ.

‘ಇಂಡಿಯನ್‌ 2’ ಸಿನಿಮಾ 1996ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್‌ ಹಿಟ್‌ ‘ಇಂಡಿಯನ್‌’ ಸಿನಿಮಾದ ಸೀಕ್ವೆಲ್‌. ಈ ಹೊಸ ಚಿತ್ರದಲ್ಲಿ ಕಮಲ ಹಾಸನ್‌ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಮನೀಷಾ ಕೊಯಿರಾಲ ಹಾಗೂ ಊರ್ಮಿಳಾ ಮಾಂತೋಡ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಾಜಲ್‌ ಅಗರವಾಲ್‌ ಈ ಸಿನಿಮಾದಲ್ಲಿ ಮುಖ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್‌ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)