ಸಾಂಪ್ರದಾಯಿಕ ಕೆಂಪು ಸೀರೆಯಲ್ಲಿ ಮೋಡಿ ಮಾಡಿದ ನಟಿ ರಾಕುಲ್ ಪ್ರೀತ್ ಸಿಂಗ್

ಮುಂಬೈ: ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸದಾ ಸಕ್ರಿಯರಾಗಿರುವ ರಾಕುಲ್ ಪ್ರೀತ್ ಸಿಂಗ್, ಪ್ರವಾಸ, ಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.
ಓದಿ... ಶ್ವಾಸಕೋಶ ಸೋಂಕು: ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ
ಇದೀಗ ಸಾಂಪ್ರದಾಯಿಕ ಕೆಂಪು ಸೀರೆಯಲ್ಲಿ ಕಂಗೊಳಿಸಿರುವ ಫೋಟೊಗಳನ್ನು ರಾಕುಲ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ನಟಿ ಅನನ್ಯಾ ಪಾಂಡೆ ಕೂಡ ಲೈಕ್ ಮಾಡಿದ್ದಾರೆ.
ಬಾಲಿವುಡ್ ನಟ ಹಾಗೂ ನಿರ್ಮಾಪಕ ಜಕ್ಕಿ ಬಗ್‌ನಾನಿ ಅವರೊಂದಿಗೆ ನಟಿ ರಾಕುಲ್ ಪ್ರೀತ್ ಸಿಂಗ್ ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಬ್ಬರ ಮದುವೆ ಕುರಿತಾದ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇವೆ.
ಇತ್ತೀಚೆಗೆ ತೆರೆಕಂಡ ‘ರನ್‌ವೇ –34’ ಚಿತ್ರದಲ್ಲಿ ಅಜಯ್ ದೇವಗನ್, ಅಮಿತಾಬ್ ಬಚ್ಚನ್ ಅವರೊಂದಿಗೆ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದರು.
ಓದಿ...
ಹಾಟ್ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ: ಎದೆಬಡಿತ ಹೆಚ್ಚಿಸಿದ ‘ನ್ಯಾಷನಲ್ ಕ್ರಶ್’
51ನೇ ವಯಸ್ಸಿಗೆ ಗಂಡು ಮಗುವಿಗೆ ತಂದೆಯಾದ ತೆಲುಗು ನಿರ್ಮಾಪಕ ದಿಲ್ರಾಜು
ಪ್ರವಾಹ ಪೀಡಿತ ಅಸ್ಸಾಂಗೆ ₹25 ಲಕ್ಷ ನೆರವು ನೀಡಿದ ಅಮೀರ್ ಖಾನ್: ಸಿಎಂ ಕೃತಜ್ಞತೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.