ಶನಿವಾರ, ಮಾರ್ಚ್ 25, 2023
30 °C

ರಾಮ್‌ ಚರಣ್‌, ಸಮಂತಾರ ’ಒಂದು ಮುತ್ತಿನ ಕಥೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಲಿವುಡ್‌ ಸ್ಟಾರ್‌ ನಟ ರಾಮ್‌ ಚರಣ್‌ ಹಾಗೂ ಬಹು ಭಾಷಾ ತಾರೆ ಸಮಂತಾ ಅವರ ಕಿಸ್ಸಿಂಗ್‌ ವಿಡಿಯೊ ಕ್ಲಿಪ್‌ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ನಾಗಚೈತನ್ಯ ಮತ್ತು ಸಮಂತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಗಾಳಿ ಸುದ್ದಿಗಳ ಬೆನ್ನಲ್ಲೇ ಕಿಸ್ಸಿಂಗ್‌ ವಿಡಿಯೊ ಕ್ಲಿಪ್‌ ವೈರಲ್‌ ಆಗಿದೆ. ಈ ವಿಡಿಯೊ ಕ್ಲಿಪ್‌ ಮೂಲತಃ ’ರಂಗಸ್ಥಲಂ’ ಚಿತ್ರದ್ದು. ಆದರೆ ರಾಮ್‌ ಚರಣ್‌ ಮನವಿಯಂತೆ ಸಿನಿಮಾದಲ್ಲಿ ಈ ದೃಶ್ಯಕ್ಕೆ ಕತ್ತರಿ ಪ್ರಯೋಗ ಮಾಡಲಾಗಿತ್ತು. 

ಏನಿದು ಮುತ್ತಿನ ಕತೆ...

ರಂಗಸ್ಥಲಂ ಚಿತ್ರದ ಚಿತ್ರೀಕರಣ ಸಮಯದಲ್ಲಿ ನಿರ್ದೇಶಕ ಸುಕುಮಾರ್‌ ಅವರು ನಾಯಕ, ನಾಯಕಿಯ ನಡುವಿನ ಅಳವಾದ ಪ್ರೀತಿಯನ್ನು ಬಿಂಬಿಸಲು ಲಿಪ್‌ ಲಾಕ್‌ ದೃಶ್ಯ ಬೇಕು ಎಂದು ಹೇಳಿದ್ದರು. ಆದರೆ ರಾಮ್‌ ಚರಣ್‌ ಕಿಸ್ಸಿಂಗ್‌ ದೃಶ್ಯ ಬೇಡ ಎಂದು ನಿರ್ದೇಶಕರಿಗೆ ಹೇಳಿದ್ದರು.

ಆದರೆ ಕತೆಗೆ ಪೂರಕವಾಗಿ ಕಿಸ್ಸಿಂಗ್‌ ದೃಶ್ಯ ಬೇಕು ಎಂದು ಸುಕುಮಾರ್‌ ಮತ್ತೆ ರಾಮ್‌ಚರಣ್‌ ಬಳಿ ಕೇಳಿದರಂತೆ. ಕೊನೆಗೆ ಸುಕುಮಾರ್ ಅವರೇ ಒಂದು ಐಡಿಯಾ ಮಾಡಿ ಸ್ವಲ್ಪ ದೂರದಿಂದಲೇ ತುಟಿಗೆ ತುಟಿ ತಾಗದಂತೆ ಕಿಸ್‌ ಮಾಡಿದಂತೆ ನಟಿಸಲು ಸೂಚಿಸಿದ್ದರು. ಅದನ್ನು ಗ್ರಾಫಿಕ್ಸ್‌ ಮೂಲಕ ಲಿಪ್‌ ಲಾಕ್‌ನಂತೆ ಚಿತ್ರೀಕರಿಸಲಾಗುವುದು ಎಂದು ರಾಮ್ ಚರಣ್‌ಗೆ ತಿಳಿಸಿದ್ದರು.

ಇದಕ್ಕೆ ರಾಮ್‌ ಚರಣ್‌ ಕೂಡ ಒಪ್ಪಿಗೆ ಸೂಚಿಸಿದ್ದರು. ಈ ಕಿಸ್ಸಿಂಗ್‌ ದೃಶ್ಯದ ಚಿತ್ರೀಕರಣದ ವೇಳೆ ಸಮಂತಾ ಕಿಸ್‌ ಮಾಡುವಂತೆ ನಟಿಸುವ ಬದಲು ಏಕಾಏಕಿ ರಾಮ್‌ ಚರಣ್‌ಗೆ ಲಿಪ್‌ ಲಾಕ್‌ ಮಾಡಿದರಂತೆ. ಮುಂದೆ ಗ್ರಾಫ್ರಿಕ್ಸ್‌ ಮಾಡುವ ಪ್ರಮೇಯ ಬರಲಿಲ್ಲ ಎಂದು ಸುಕುಮಾರ್‌ ಒಂದು ಕಡೆ ಹೇಳಿಕೊಂಡಿದ್ದಾರೆ.

ರಂಗಸ್ಥಲಂ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಈ ವಿಡಿಯೊ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಆ ಮುತ್ತಿನ ಕತೆಯ ಹಿಂದಿರುವ ರಹಸ್ಯ ಬಯಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು