ರಾಮ್‌ಗೋಪಾಲ್ ವರ್ಮಾ ಮಾಡಿರುವ ‘ಮೆಗಾ ಫ್ಯಾಮಿಲಿ‘ ಟ್ವೀಟ್ ಹಿಂದಿನ ಮರ್ಮವೇನು?

ಕ್ರೈಂ ಥ್ರಿಲ್ಲರ್, ರಾಜಕೀಯ ವಿಷಯಗಳ ಬಗ್ಗೆಯೇ ಸಿನಿಮಾ ಮಾಡುವ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ ಕಣ್ಣು ಈಗ ಫ್ಯಾಮಿಲಿ ಕಡೆ ತಿರುಗಿದೆ.
'ಕಮ್ಮ ರಾಜ್ಯಂ ಕಡಪ ರೆಡ್ಡಿಲು' ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಭಾರಿ ವಿವಾದ ಸೃಷ್ಟಿಸಿದೆ. ಈ ನಡುವೆಯೇ ಆರ್‌ಜಿವಿ ಹೊಸ ಸಿನಿಮಾ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.
‘ಮೆಗಾ ಫ್ಯಾಮಿಲಿ‘ಯು 39 ಮಕ್ಕಳನ್ನು ಹೊಂದಿರುವ ವ್ಯಕ್ತಿಯ ಕಥೆ. ಆದರೆ, ಇಲ್ಲಿ ಸಾಕಷ್ಟು ಮಕ್ಕಳಿದ್ದಾರೆ ಮತ್ತು ಮಕ್ಕಳ ಸಿನಿಮಾ ಮಾಡುವುದರಲ್ಲಿ ನಾನು ಅಷ್ಟು ನಿಪುಣನಲ್ಲ. ಹಾಗಾಗಿ ನಾನು ಮಕ್ಕಳ ಸಿನಿಮಾ ಮಾಡುವುದಿಲ್ಲ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
Indirectly "PILLALU RA MEERU" Ani troll chesthunav gaaa😂😂
— Rajamouli (@Sachin_264) October 29, 2019
ಅವರ ಟ್ವೀಟ್ ನೋಡಿದ ಅನೇಕರು ನಿಜಕ್ಕೂ ಆರ್‌ಜಿವಿ ಈ ಸಿನಿಮಾ ಮಾಡುತ್ತಾರೆಯೇ ಎನ್ನುವ ಗೊಂದಲಕ್ಕೆ ಬಿದ್ದಿದ್ದಾರೆ. ವರ್ಮಾ ತಮ್ಮ ಈ ಹಿಂದಿನ ಸಿನಿಮಾಗಳನ್ನು ಪ್ರಕಟಿಸಿದ ರೀತಿ ಹಾಗೂ ಈ ಸಿನಮಾದ ಹೇಳಿದ ರೀತಿ ನೋಡಿ ಟ್ವೀಟಿಗರಲ್ಲಿ ಈ ಗೊಂದಲ ಮೂಡಿದ್ದು, ಇದರ ಹಿಂದಿನ ಮರ್ಮವನ್ನು ವರ್ಮಾ ಅವರೇ ಹೇಳಬೇಕಿದೆ.
@RGVzoomin Be Like... 😂😂😂 pic.twitter.com/Q9dT0ZbiXG
— MaSSMBArriving.. (@UrstrulyShiva09) October 29, 2019
ರಾಮ್ ಗೋಪಾಲ್ ವರ್ಮಾ ಅವರ ಈ ಟ್ವೀಟ್ಗೆ ಪವನ್ ಕಲ್ಯಾಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ವ್ಯಂಗ್ಯ ಮಾಡಿದ್ದು, ಸಾಕಷ್ಟು ಟ್ರೋಲ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.