ಸೋಮವಾರ, ಮಾರ್ಚ್ 27, 2023
32 °C

ಕೊರೊನಾ ಪಾಸಿಟಿವ್‌ ಎಂದ ರಾಮ್‌ ಗೋಪಾಲ್‌ ವರ್ಮಾಗೆ ನೆಟ್ಟಿಗರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು ಅವರಿಗೆ ನೆಟ್ಟಿಗರು ಬುದ್ದಿಮಾತು ಹೇಳಿ ಟ್ರೋಲ್‌ ಮಾಡಿದ್ದಾರೆ.

ಬುಧವಾರ ರಾಮ್‌ ಗೋಪಾಲ್‌ ವರ್ಮಾ ನನಗೆ ಕೊರೊನಾ ಪಾಸಿಟಿವ್ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಟ್ವೀಟ್‌ ಮಾಡಿದ್ದರು. ಇದರಿಂದ ಅವರ ಅಭಿಮಾನಿಗಳ ಗಾಬರಿಯಾಗಿದ್ದರು. ಬಳಿಕ ಟ್ವೀಟ್‌ ಮಾಡಿದ್ದ ವರ್ಮಾ ವೈದ್ಯರು ನನಗೆ ಏಪ್ರಿಲ್‌ ಫೂಲ್‌ ಮಾಡಲು ಆ ರೀತಿ ಹೇಳಿದ್ದಾರೆ, ಇದು ನನ್ನ ತಪ್ಪು ಅಲ್ಲ ಎಂದು ಟ್ವೀಟ್‌ ಮಾಡಿದ್ದರು.

ಇದರಿಂದ ಕುಪಿತಗೊಂಡ ನೆಟ್ಟಿಗರು ವರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರಂತೂ ಅಸಭ್ಯವಾಗಿ ಕಾಮೆಂಟ್‌ ಮಾಡಿದ್ದಾರೆ.

ಪ್ರಕಾಶ್‌ ಎಂಬುವರು ನೀವು ಕೊರೊನಾ ವೈರಸ್‌ಗಿಂತ ಅಪಾಯಕಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇರುವ ನೀವು ಇಂತಹ ಪರಿಸ್ಥಿತಿಯಲ್ಲಿ ಈ ರೀತಿ ಟ್ವೀಟ್‌ ಮಾಡುವುದು ಸರಿ ಅಲ್ಲ, ಈಗಾಗಲೇ ಜನರು ಭಯಭೀತರಾಗಿದ್ದಾರೆ ಎಂದು ಬುದ್ದಿ ಮಾತು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು