ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಂಗಕ್ಕೆ ಮತ್ತೆ ಮರಳುವ ಮುನ್ಸೂಚನೆ ನೀಡಿದ ಮೋಹಕ ತಾರೆ ರಮ್ಯಾ

Last Updated 17 ಫೆಬ್ರುವರಿ 2022, 11:16 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಅವರು ಚಿತ್ರರಂಗಕ್ಕೆ ಮತ್ತೆ ಮರಳುವ ಮುನ್ಸೂಚನೆ ನೀಡಿದ್ದಾರೆ.

ಈ ವಿಚಾರವಾಗಿ ಗುರುವಾರ ಟ್ವೀಟ್‌ ಮಾಡಿರುವ ಅವರು, ‘ನಾನು ಚಿತ್ರರಂಗಕ್ಕೆ ಮತ್ತೆ ಮರಳುವ ವಿಚಾರದ ಕುರಿತು ಕುತೂಹಲ ಮತ್ತು ಊಹಾಪೋಹಗಳು ಹೆಚ್ಚುತ್ತಿವೆ. ಈ ಬಗ್ಗೆ ನನಗೆ ಅರ್ಥವಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಕಳೆದ ಕೆಲ ತಿಂಗಳಿಂದ ನಾನು ಆಸಕ್ತಿಕರ ಚಿತ್ರಕಥೆಗಳನ್ನು ಕೇಳಿದ್ದೇನೆ. ಒಂದು ವೇಳೆ ಎಲ್ಲವೂ ಸರಿಯಾಗಿ ನಡೆದರೆ, ಅದನ್ನು ನಾನು ನಿಮಗೆ ಹೇಳಲಿದ್ದೇನೆ. ಅಲ್ಲಿಯವರೆಗೂ ಕುತೂಹಲವನ್ನು ತಡೆಹಿಡಿದುಕೊಳ್ಳಿ’ ಎಂದು ಟ್ವೀಟಿಸಿದ್ದಾರೆ.

ರಾಜಕೀಯಕ್ಕೆ ಪ್ರವೇಶಿಸಿದ ನಂತರ ನಟಿ ರಮ್ಯಾ ಅವರು ಚಿತ್ರರಂಗದಿಂದ ದೂರ ಉಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT