ಬುಧವಾರ, ಏಪ್ರಿಲ್ 21, 2021
32 °C

ಮರಳಿ ಬಂದ ಪದ್ಮಾವತಿ: ರಮ್ಯಾ ಟ್ವಿಟರ್ ಖಾತೆ ಓಪನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟಿ ಹಾಗೂ ರಾಜಕಾರಣಿ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಗಳ ಕಡೆ ಮುಖ ಮಾಡಿದ್ದು, ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಕಳೆದೊಂದು ವರ್ಷದದಿಂದ ರಮ್ಯಾ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದರು. ಇದೀಗ ಅವರ ಟ್ವಿಟರ್‌ ಖಾತೆ ಆಕ್ಟೀವ್ ಆಗಿದೆ. ಪದ್ಮಾವತಿ ಮತ್ತೆ ಟ್ವಿಟರ್‌ಗೆ ಮರಳಿರುವುದಕ್ಕೆ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ಕಳೆದ ವರ್ಷ ರಮ್ಯಾ ಟ್ವಿಟರ್‌ ಖಾತೆ ಡಿಲೀಟ್‌ ಮಾಡಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದ್ದವು. ಜೂನ್‌ 1ರಂದು ಅವರು ಕೊನೆಯ ಟ್ವೀಟ್‌ ಮಾಡಿದ್ದರು. ಟ್ವಿಟರ್‌ ಖಾತೆ ಮತ್ತೆ ಆಕ್ಟೀವ್‌ ಆಗಿರುವುದರಿಂದ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಕಳೆದೊಂದು ವರ್ಷದಲ್ಲಿ ರಮ್ಯಾ ಎಲ್ಲಿದ್ದರೂ ಎಂಬುದರ ಬಗ್ಗೆಯೂ ಯಾವುದೇ ಮಾಹಿತಿಗಳು ಇರಲಿಲ್ಲ. ಅವರು ದುಬೈ ಅಥವಾ ಲಂಡನ್‌ನಲ್ಲಿ ನೆಲೆಸಿದ್ದಾರೆ ಎನ್ನಲಾಗಿತ್ತು.

ಕನ್ನಡ ಸಿನಿಮಾ ರಂಗದಲ್ಲಿ ನಂಬರ್‌ 1 ನಟಿಯಾಗಿದ್ದ ರಮ್ಯಾ 2016ರ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ನಾಗರಹಾವು ಅವರು ನಟಿಸಿದ ಕೊನೆಯ ಸಿನಿಮಾ. ನಂತರ ರಾಜಕರಾಣಕ್ಕೆ ಬಂದ ರಮ್ಯಾ ಕಾಂಗ್ರೆಸ್ ಪಕ್ಷ ಸೇರಿ ಸಂಸದೆಯಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಲಿಲ್ಲ. ಪ್ರಧಾನಿ ಮೋದಿ ಅವರಿಗೆ ಟ್ವೀಟ್‌ಗಳ ಮೂಲಕ ಟಾಂಗ್ ಕೊಡುತ್ತಿದ್ದರು. ಆ ಮೂಲಕ ಸದಾ ಸುದ್ದಿಯಾಗುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು