ಬುಧವಾರ, ಆಗಸ್ಟ್ 4, 2021
21 °C
ರಾನಾ ಮದುವೆ

ರಾನಾ ದಗ್ಗುಬಾಟಿ-ಮಿಹಿಕಾ ಬಜಾಜ್ ಮದುವೆ ಮುಂದೂಡಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಹಿಕಾ ಬಜಾಜ್‌ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ 'ಬಾಹುಬಲಿ' ರಾನಾ ದಗ್ಗುಬಾಟಿ ಮದುವೆ ಮುಂದೂಡಿಕೆಯಾಗಿದೆ ಎಂದು ಹೈದರಾಬಾದ್‌ನ ಸ್ಥಳೀಯ ಪೋರ್ಟಲ್‌ಗಳು ವರದಿ ಮಾಡಿವೆ.

ತಮ್ಮ ಬಹುಕಾಲದ ಗೆಳತಿ ಮಿಹಿಕಾ ಬಜಾಜ್‌ ಜತೆಗಿನ ನಿಶ್ಚಿತಾರ್ಥದ ವಿವರವನ್ನು ರಾನಾ ಮೇ 21ರಂದು ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ಜಾಹೀರು ಮಾಡಿದ್ದರು. ಆಗಸ್ಟ್‌ 8ಕ್ಕೆ ಈ ಜೋಡಿಯ ಮದುವೆ ನಡೆಯಲಿದೆ ಎಂದು ಕುಟುಂಬದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.

ಇದೀಗ ಕೊರೊನಾ ವೈರಸ್‌ ಪಿಡುಗು ಹೆಚ್ಚಾಗಿರುವ ಕಾರಣ ಅನಿವಾರ್ಯವಾಗಿ ಮದುವೆ ಮುಂದೂಡಲು ಎರಡೂ ಕುಟುಂಬಗಳು ನಿರ್ಧರಿಸಿವೆ. ರಾನಾ ದಗ್ಗುಬಾಟಿ ಅವರ ತಂದೆ ಸುರೇಶ್‌ ಬಾಬು ಮತ್ತು ಮಿಹಿಕಾ ಬಜಾಜ್‌ರ ತಾಯಿ ಬಂಟಿ ಹೊಸ ಮದುವೆ ದಿನಾಂಕದ ಹುಡುಕಾಟದಲ್ಲಿದ್ದಾರೆ ಎಂದು ಟಾಲಿವುಡ್‌ ಸಿನಿ ಜಾಲತಾಣಗಳು ವರದಿ ಮಾಡಿವೆ.

 
 
 
 

 
 
 
 
 
 
 
 
 

And it’s official!! 💥💥💥💥

Rana Daggubati (@ranadaggubati) ರಿಂದ ಹಂಚಲಾದ ಪೋಸ್ಟ್ ಅವರು ರಂದು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು