ಸೋಮವಾರ, ಆಗಸ್ಟ್ 2, 2021
28 °C

ಆಗಸ್ಟ್‌ನಲ್ಲಿ ರಾನಾ ಮದುವೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಲಿವುಡ್‌ ನಟ ರಾನಾ ದಗ್ಗುಬಾಟಿ ತಮ್ಮ ಪ್ರೇಯಸಿ ಮಿಹಿಕಾ ಬಜಾಜ್‌ ಜೊತೆ ಇತ್ತೀಚೆಗೆ ಸದ್ದಿಲ್ಲದೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಲಾಕ್‌ಡೌನ್ ಇದ್ದ ಕಾರಣ ಆತ್ಮೀಯರಿಗಷ್ಟೇ ಆಮಂತ್ರಣ ನೀಡಿ ರಿಂಗ್‌ ತೊಡಿಸುವ ಕಾರ್ಯಕ್ರಮ ಮಾಡಿದ್ದರು. ಕಾರ್ಯಕ್ರಮದಲ್ಲಿ ಆಡಂಬರ ಇರಲಿಲ್ಲ. ಇದೀಗ, ಈ ಜೋಡಿ ಆಗಸ್ಟ್‌ನಲ್ಲಿ ಹಸೆಮಣೆ ಏರಲಿದೆ ಎಂಬ ಸುದ್ದಿ ಬಂದಿದೆ. 

ಉತ್ತರ ಭಾರತ ಮೂಲದ ಮಿಹಿಕಾ, ದುಗ್ಗುಬಾಟಿ ಕುಟುಂಬಕ್ಕೆ ಮೊದಲಿನಿಂದಲೂ ಪರಿಚಿತರು. ಮಿಹಿಕಾ ಅವರ ತಂದೆ–ತಾಯಿ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಉತ್ತರ ಭಾರತದ ಸಂಪ್ರದಾಯದಂತೆ ಎಂಗೇಜ್‌ಮೆಂಟ್‌ಗೆ ಮೊದಲು ರೋಕಾ ಕಾರ್ಯಕ್ರಮ ನಡೆದಿತ್ತು. 

ಈಗ ಎರಡೂ ಕುಟುಂಬಗಳು ಸೇರಿ ಮದುವೆ ದಿನಾಂಕ ಗೊತ್ತು ಮಾಡಿವೆ. ಜ್ಯೋತಿಷಿಗಳ ಪ್ರಕಾರ ರಾನಾ ಹಾಗೂ ಮಿಹಿಕಾ ಮದುವೆಗೆ ಆಗಸ್ಟ್‌ 8 ಉತ್ತಮ ದಿನವಂತೆ. ಆದರೆ ಮದುವೆಯ ದಿನಾಂಕವನ್ನು ಕುಟುಂಬಸ್ಥರು ಇನ್ನು ಅಧಿಕೃತವಾಗಿ ತಿಳಿಸಿಲ್ಲ. 

ರಾನಾ ತಂದೆ, ನಿರ್ಮಾಪಕ ಸುರೇಶ್‌ ಬಾಬು ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಡಿಸೆಂಬರ್‌ಗೆ ಮೊದಲು ರಾನಾ ಮದುವೆಗೆ ಉತ್ತಮ ದಿನಾಂಕ ನೋಡುತ್ತಿದ್ದೇವೆ’ ಎಂದಿದ್ದರು. ಅವರ ಇಡೀ ಕುಟುಂಬ ರಾಣಾ ಮದುವೆಗೆ ಕಾಯುತ್ತಿದೆಯಂತೆ. ಅಂದಹಾಗೆ, ರಾನಾ ಅವರು ಸುರೇಶ್‌ ಬಾಬು ಅವರ ಹಿರಿಯ ಮಗ.

ಇನ್ನೊಂದೆಡೆ ರಾನಾ ಅಭಿಯನದ ‘ವಿರಾಟ ಪರ್ವಂ’ ಚಿತ್ರದ ಶೂಟಿಂಗ್‌ಗೆ ಲಾಕ್‌ಡೌನ್‌ ಕಾರಣಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಮದುವೆಗೆ ಮೊದಲು ಶೂಟಿಂಗ್‌ಗೆ ಬಲ್ಲಾಳದೇವ ಒಪ್ಪಿಗೆ ನೀಡುವುದು ಅನುಮಾನ ಎಂಬ ಮಾತು ಇದೆ.

ಒಂದು ವೇಳೆ ಆಗಸ್ಟ್‌ನಲ್ಲಿ ರಾನಾ ಮದುವೆ ನಿಶ್ಚಯವಾದರೆ ಮದುವೆಯ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ ರಾನಾ ಶೂಟಿಂಗ್‌ನಲ್ಲಿ ಭಾಗವಹಿಸಬಹುದು ಎನ್ನುತ್ತಿವೆ ಟಾಲಿವುಡ್ ಮೂಲಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು