ಭಾನುವಾರ, ಮೇ 16, 2021
22 °C

ಆಲಿಯಾ ಭಟ್‌–ರಣಬೀರ್‌ ಕಪೂರ್‌ ಮದುವೆ ಆಮಂತ್ರಣ ಪತ್ರಿಕೆ ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ದಿಪೀಕಾ–ರಣವೀರ್‌ ಜೋಡಿ ಹಸೆಮಣೆ ಏರಿದ ನಂತರದಲ್ಲಿ ಬಾಲಿವುಡ್‌ನಲ್ಲಿ ಸಾಲು ಸಾಲು ಮದುವೆಗಳು ನಡೆದವು. ಈಗ ಆಲಿಯಾ ಭಟ್‌–ರಣವೀರ್‌ ಮದುವೆಯ ಸುದ್ದಿ ಜೋರು ಸದ್ದು ಮಾಡುತ್ತಿದೆ.

ಕಪೂರ್‌ ಕುಟುಂಬದ ರಣಬೀರ್‌ ಕಪೂರ್‌ ಹಾಗೂ ಮಹೇಶ್‌ ಭಟರ್‌ ಮಗಳು ಆಲಿಯಾ ಭಟ್‌ ಡೇಟಿಂಗ್‌ ಮಾಡುತ್ತಿದ್ದ ಸುದ್ದಿ ಗುಟ್ಟಾಗಿ ಏನು ಉಳಿದಿಲ್ಲ. ಶೀಘ್ರದಲ್ಲಿ ಮದುವೆಯಾಗುವುದಾಗಿ ಇಬ್ಬರೂ ಹೇಳಿದ್ದರು. ಹೀಗಿರುವಾಗಲೇ ಈ ಜೋಡಿಯ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಮದುವೆಗೆ 32 ಆಗಬೇಕಂತೆ: ಆಲಿಯಾ ಇಂಗಿತ

ಆದರೆ, ಈ ಆಮಂತ್ರಣ ಪತ್ರಿಕೆ ನಿಜವೇ ಎನ್ನುವ ಅನುಮಾನವನ್ನು ಹುಟ್ಟುಹಾಕಿದೆ. ಈ ಹಿಂದೆ ಆಲಿಯಾ–ಕಪೂರ್‌ ಮದುವೆಯ ಚಿತ್ರ ಎಂದು ಅಭಿಮಾನಿಗಳು ಆಲಿಯಾ ಸಿನಿಮಾದ ದೃಶ್ಯವೊಂದನ್ನು ಎಡಿಟ್‌ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈಗ ಲಗ್ನ ಪತ್ರಿಕೆಯೂ ಫೇಕ್‌ ಎನ್ನುವುದಕ್ಕೆ ಹಲವು ಅಂಶಗಳು ಕಾರಣವಾಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಲಗ್ನ ಪತ್ರಿಕೆ ಏನಿದೆ?

“Mrs. Neetu & Mr. Rishi Kapoor cordially invite you for the Sagan Ceremony of their son Ranbir with Aliya (D/o Mrs. Soni & Mr. Mukesh Bhatt on Wednesday, 22th January, 2020 5:00 pm onwards." 

ಹೀಗೆಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಈ ಲಗ್ನ ಪತ್ರಿಕೆಯ ಪ್ರಕಾರ ಆಲಿಯಾ– ರಣಬೀರ್‌ ಮದುವೆ, ಪ್ರಿಯಾಂಕ–ನಿಕ್‌ ಮದುವೆಯಾದ ಸ್ಥಳವಾದ ಜೋದ್‌ಪುರದ ಉಮಿದ್‌ ಭವನದಲ್ಲಿ ನಡೆಯಲಿದೆ.

ಆದರೆ, ಈ ಆಮಂತ್ರಣ ಪತ್ರಿಕೆಯೇ ಸುಳ್ಳು ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಆಲಿಯಾ ಭಟ್‌ ಹೆಸರನ್ನು  ಇಲ್ಲಿ ತಪ್ಪಾಗಿ ಬರೆಯಲಾಗಿದೆ. ಜೊತೆಗೆ ಮಹೇಶ್‌ ಭಟ್‌ ಹೆಸರನ್ನು ಮುಕೇಶ್‌ ಭಟ್‌ ಎಂದು ಬರೆಯಲಾಗಿದೆ. ಮದುವೆಯ ದಿನಾಂಕವನ್ನು ಉಲ್ಲೇಖಿಸುವಾಗಲೂ 22th ಎಂದು ಬರೆಯಲಾಗಿದೆ. ಪ್ರ್ಯಾಂಕ್‌ ಮಾಡುವುದಕ್ಕಾಗಿ ಈ ರೀತಿಯ ಲಗ್ನ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರಬಹುದು ಎಂಬುದು ಬಿ–ಟೌನ್‌ ಮಂದಿಯ ಮಾತು. 

ನಿಜ ಜೀವನದಲ್ಲಿ ಈ ಜೋಡಿ 2020ಕ್ಕೆ  ಒಂದಾಗುವುದೊ ಇಲ್ಲವೊ ಗೊತ್ತಿಲ್ಲ. ಆದರೆ, ಬೆಳ್ಳಿ ಪರದೆಯ ಮೇಲಂತೂ ಅಯಾನ್‌ ಮುಖರ್ಜಿಯ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಈ ಜೋಡಿ ಕೈ–ಕೈ ಹಿಡಿದು ಪ್ರೀತಿಯ ರಾಗ ಹಾಡಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು