1996ರಲ್ಲಿ ‘ರಾಜಾ ಕಿ ಆಯೇಗಿ ಬಾರಾತ್’ ಸಿನಿಮಾ ಮೂಲಕ ನಟಿ ರಾಣಿ ಮುಖರ್ಜಿ ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಉರುಳಿದೆ.

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ‘ಮರ್ದಾನಿ 3’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಈ ಮೂವತ್ತು ವರ್ಷಗಳ ಪಯಣವನ್ನು ರಾಣಿ ಮುಖರ್ಜಿ ಒಂದು ಪತ್ರದ ಮುಖೇನ ಮೆಲುಕು ಹಾಕಿದ್ದಾರೆ. ‘ಕುತೂಹಲ, ಭಯ, ಕಥೆಯ ಕುರಿತ ಪ್ರೀತಿ ನನ್ನ ಈ ಪಯಣವನ್ನು ಆರಂಭಿಸಿತು. ಇದು ಈಗ ವೃತ್ತಿಯಾಗಿ ಬದಲಾಗಿದೆ. ಮೂರು ದಶಕಗಳು ಉರುಳಿದ್ದರೂ, ಇಂದಿಗೂ ನಾನು ಹೊಸಬಳಾಗಿಯೇ ಹೆಜ್ಜೆಗಳನ್ನು ಇಡುತ್ತಿದ್ದೇನೆ. ಹೊಸ ಸವಾಲುಗಳಿಗಾಗಿ ಎದುರು ನೋಡುತ್ತಿರುತ್ತೇನೆ. ಎಲ್ಲಿಯವರೆಗೂ ಹೇಳಲು ಕಥೆಗಳು, ಭಾವನೆಗಳು ಇರುತ್ತಾವೆಯೋ ಅಲ್ಲಿಯವರೆಗೂ ಈ ಸುಂದರವಾದ ಕಲೆಯ ವಿದ್ಯಾರ್ಥಿಯಾಗಿರುತ್ತೇನೆ’ ಎಂದಿದ್ದಾರೆ 47 ವರ್ಷದ ರಾಣಿ ಮುಖರ್ಜಿ.

‘ಬಂಟಿ ಔರ್ ಬಬ್ಲಿಯಲ್ಲಿ ದೊಡ್ಡ ಕನಸನ್ನು ಹೊತ್ತ ಸಣ್ಣ ಪಟ್ಟಣದ ಹುಡುಗಿಯಾಗಿ, ‘ನೋ ಒನ್ ಕಿಲ್ಡ್ ಜೆಸ್ಸಿಕಾ’ದಲ್ಲಿ ದಿಟ್ಟ ಪತ್ರಕರ್ತೆಯಾಗಿ, ‘ಮರ್ದಾನಿ’ಯಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುವಾಗ ಆ ಪಾತ್ರಗಳ ಜೊತೆಯಲ್ಲಿ ಒಂದು ದೃಢವಾದ ಸಂಬಂಧದ ಭಾವನೆ ಬಂದಿತ್ತು. ಈ ಪಾತ್ರಗಳು ಎಂದಿಗೂ ಹಿಂದಡಿ ಇಡದೆ, ಪುರುಷ ಪ್ರಧಾನ ವ್ಯವಸ್ಥೆಯನ್ನು ಒಡೆಯುವಂತೆ ಕಂಡವು. ನನ್ನ ಜೀವನದಲ್ಲಿ ಮದುವೆ, ಮಕ್ಕಳು ಎನ್ನುವುದು ಈ ಪಯಣಕ್ಕೆ ಅಡ್ಡಿಯಾಗಲೇ ಇಲ್ಲ. ಇದು ಸಿನಿಮಾ ಮೇಲಿನ ನನ್ನ ಗಮನವನ್ನು ಇನ್ನಷ್ಟು ಕೇಂದ್ರೀಕರಿಸಿತು’ ಎಂದಿದ್ದಾರೆ ರಾಣಿ.

ರಾಣಿ ನಟನೆಯ ‘ಮರ್ದಾನಿ 3’ ಸಿನಿಮಾ ಇದೇ 30ರಂದು ತೆರೆಕಾಣುತ್ತಿದ್ದು, ಚಿತ್ರವನ್ನು ಅಭಿರಾಜ್ ಮಿನವಾಲ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.