ಬೆಂಗಳೂರು: ಮುಖದ ಮೇಲೆ ಸದಾ ಆಕರ್ಷಕ ನಗುವಿನ ಮೂಲಕ ಸಿನಿ ರಸಿಕರನ್ನು ಸೆಳೆಯುವ ‘ಕಿರಿಕ್ ಪಾರ್ಟಿ’ನಟಿ ರಶ್ಮಿಕಾ ಮಂದಣ್ಣ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಹೊಸ ಐಶಾರಾಮಿ ರೇಂಜ್ ರೋವರ್ ಕಾರು ಖರೀದಿಸಿರುವ ರಶ್ಮಿಕಾ, ತನ್ನ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ, ಕಪ್ಪು ಬಣ್ಣದ ಹೊಸ ಐಶಾರಾಮಿ ರೇಂಜ್ ರೋವರ್ ಕಾರಿನ ಮುಂದೆ ನಿಂತಿರುವ ಚಿತ್ರ ಹಂಚಿಕೊಂಡಿರುವ ರಶ್ಮಿಕಾ, ಇದರ ಜೊತೆಗೆ ಅಭಿಮಾನಿಗಳಿಗೆ ಧನ್ಯವಾದ ಹೇಳುವ ಸಂದೇಶವನ್ನು ಹಾಕಿದ್ದಾರೆ.

ನನ್ನ ಸಿನಿ ಪಯಣದಲ್ಲಿ ತನ್ನ ಅಭಿಮಾನಿ ಬಳಗ ಸದಾ ನನ್ನ ಜೊತೆಗಿದೆ. ಅವರು ನನ್ನ ಜೊತೆ ಇಲ್ಲವಾಗಿದ್ದರೆ, ಅಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ನಾನು ನನ್ನ ಹಲವು ವಿಷಯಗಳನ್ನು ನನ್ನೊಳಗೆ ಇಟ್ಟುಕೊಳ್ಳುತ್ತೇನೆ. ಆದರೆ, ಈ ಬಾರಿ, ಈ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ಏಕೆಂದರೆ, ನೀವು ಸದಾ ನನ್ನ ಪಯಣದ ಜೊತೆಗಿದ್ದೀರಿ. ಹಾಗಾಗಿ, ನಿಮಗೆ ಇದು ತಿಳಿಬೇಕು ಎಂದು ಬರೆದುಕೊಂಡಿದ್ದಾರೆ.

ನಾನು ಈ ಮಟ್ಟಕ್ಕೆ ಬೆಳೆಯುವ ಸಾಮರ್ಥ್ಯ ಹೊಂದಿದ್ದೇನೆ ಎಂದು ನಾನು ಯೋಚಿಸಿಯೇ ಇರಲಿಲ್ಲ. ಇವತ್ತು ವಿಮಾನನಿಲ್ದಾಣಕ್ಕೆ ತೆರಳುತ್ತಿರುವ ಈ ಸಮಯದಲ್ಲಿ ನಾವು ಎಲ್ಲಿಗೆ ಬಂದು ತಲುಪಿದ್ದೇವೆ ಎಂಬುದನ್ನು ನಿಮಗೆ ತಿಳಿಸಲು ಎರಡು ನಿಮಿಷ ಸಮಯ ತೆಗೆದುಕೊಂಡು ಈ ಚಿತ್ರಗಳನ್ನು ಕ್ಲಿಕ್ಕಿಸಿದ್ದೇನೆ. ನನ್ನ ಕಷ್ಟಕ್ಕೆ ಫಲ ಸಿಗುವಂತೆ ಮಾಡಿದಕ್ಕೆ, ಈ ಪಯಣದಲ್ಲಿ ಜೊತೆಗಿದ್ದಿದ್ದಕ್ಕೆ ಮತ್ತು ತೋರಿದ ಪ್ರೀತಿಗೆ ಧನ್ಯವಾದ. ನೀವು ನನ್ನ ಜೊತೆಗಿರುವುದು ನಿಜಕ್ಕೂ ನನಗೆ ಸಂತಸ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಕಿರಿಕ್ ಪಾರ್ಟಿಯ ಅಭೂತಪೂರ್ವ ಯಶಸ್ಸಿನ ಬಳಿಕ ಟಾಲಿವುಡ್, ಕಾಲಿವುಡ್‌ನಲ್ಲಿ ರಶ್ಮಿಕಾಗೆ ಹಲವು ಅವಕಾಶಗಳು ಒಲಿದುಬಂದವು. ಗೂಗಲ್‌ನ 2020ರ ನ್ಯಾಶನಲ್ ಕ್ರಶ್ ಖ್ಯಾತಿಯ ಕೊಡಗಿನ ಹುಡುಗಿ ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ ಎಂಬ ವಾತಾವರಣ ಸೃಷ್ಟಿಯಾಗಿದೆ. ಯಶಸ್ಸಿನ ಹಾದಿಯಲ್ಲಿ ಬಾಲಿವುಡ್‌ವರೆಗೆ ಬಂದು ನಿಂತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.