ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆಲ ಅಗೆದು ಹಣದ ಮೂಟೆ ಎತ್ತಿದ ರಶ್ಮಿಕಾ ಮಂದಣ್ಣ! ‘ಕುಬೇರ’ನ ಹಿಂದೆ ಶ್ರೀವಲ್ಲಿ

ಕುಬೇರ ಚಿತ್ರದ ಫಸ್ಟ್ ಲುಕ್ ಬಿಡುಗಡೆ
Published 5 ಜುಲೈ 2024, 14:34 IST
Last Updated 5 ಜುಲೈ 2024, 14:34 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗಿನ ಹ್ಯಾಪಿ ಡೇಸ್, ಲೈಫ್ ಇಸ್ ಬ್ಯೂಟಿಫುಲ್, ಫಿದಾ ಖ್ಯಾತಿಯ ನಿರ್ದೇಶಕ ಶೇಖರ್ ಕಮ್ಮುಲಾ ;ಕುಬೇರ‘ ಎಂಬ ಹೊಸ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಅಂದಹಾಗೇ ಈ ಚಿತ್ರದಲ್ಲಿ ಕನ್ನಡತಿ, ರಶ್ಮಿಕಾ ಮಂದಣ್ಣ ಅವರೇ ಲೀಡ್ ರೋಲ್‌ನಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರದ ಫಸ್ಟ್ ಲುಕ್ ಅನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

ಈ ಫಸ್ಟ್ ಲುಕ್ ಸಾಕಷ್ಟು ಗಮನ ಸೆಳೆದಿದ್ದು 48 ಸೆಕೆಂಡ್ ವಿಡಿಯೊದಲ್ಲಿ ರಶ್ಮಿಕಾ ನೆಲ ಅಗೆದು ಹಣದ ಬ್ಯಾಗ್ ತೆಗೆದಿದ್ದಾರೆ. ಇಷ್ಟು ಹೊರತುಪಡಿಸಿದರೆ ಈ ಚಿತ್ರದ ಬೇರೆ ಅಪ್‌ಡೇಟ್‌ಗಳು ಇನ್ನೂ ತಿಳಿದು ಬಂದಿಲ್ಲ.

ಇದು ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಾಣವಾಗುತ್ತಿದ್ದು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ರಶ್ಮಿಕಾ ಜೊತೆಯಾಗಿ ನಾಗಾರ್ಜುನ್, ಧನುಷ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ವಿಶೇಷ ಫಸ್ಟ್ ಲುಕ್ ಭಾರಿ ಗಮನ ಸೆಳೆದಿದೆ.

ಇನ್ನು ರಶ್ಮಿಕಾ ಅವರ ಬಹುನಿರೀಕ್ಷಿತ ಪುಷ್ಪ–2 ಬಿಡುಗಡೆ ಮುಂದೆ ಹೋಗಿದ್ದು ಡಿಸೆಂಬರ್ 6ಕ್ಕೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT