ಸೋಮವಾರ, ಫೆಬ್ರವರಿ 24, 2020
19 °C

ಹೊಸದಾಗಿ ಫೋಟೊಶೂಟ್‌ ಮಾಡಿಸಿದ ರಶ್ಮಿಕಾ ಮಂದಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ರಶ್ಮಿಕಾ ಮಂದಣ್ಣ ತೆಲುಗಿನ ‘ಸರಿಲೇರು ನೀಕೆವ್ವರು’ ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ. ಈ ಚಿತ್ರದ ಮೂಲಕ ಅವರು ಮೊದಲ ಬಾರಿಗೆ ‘ಟಾಲಿವುಡ್‌ ಪ್ರಿನ್ಸ್’ ಮಹೇಶ್‌ಬಾಬು ಜೊತೆಗೆ ತೆರೆ ಹಂಚಿಕೊಂಡಿದ್ದರು. ವಿಜಯ ದೇವರಕೊಂಡ ಜೊತೆಗೆ ನಟಿಸಿದ್ದ ‘ಡಿಯರ್ ಕಾಮ್ರೇಡ್‌’ ಚಿತ್ರದ ಸೋಲು ಮತ್ತು ಐಟಿ ದಾಳಿಯಿಂದ ಕೆಂಗೆಟ್ಟಿದ್ದ ರಶ್ಮಿಕಾಗೆ ಈ ಚಿತ್ರದ ಯಶಸ್ಸು ಹೊಸ ಹುಮ್ಮಸ್ಸು ತುಂಬಿರುವುದಂತೂ ಸತ್ಯ. ಜೊತೆಗೆ, ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳಿಗೆ ಈ ಗೆಲುವು ರತ್ನಗಂಬಳಿ ಹಾಸುವುದರಲ್ಲಿ ಅನುಮಾನವಿಲ್ಲ ಎನ್ನುವುದು ಆಕೆಯ ಅಭಿಮಾನಿಗಳ ಲೆಕ್ಕಾಚಾರ.

ಸದ್ಯ ಅವರು ಅಲ್ಲು ಅರ್ಜುನ್‌ ಜೊತೆಗೆ ಹೊಸ ಚಿತ್ರದಲ್ಲಿ ಸೊಂಟ ಬಳುಕಿಸಲು ಸಿದ್ಧವಾಗಿದ್ದಾರೆ. ಮತ್ತೊಂದೆಡೆ ‘ಅಲಾ ವೈಕುಂಠಪುರಮುಲೋ’ ಚಿತ್ರದ ಯಶಸ್ಸಿನ ಅಲೆಯಲ್ಲಿ ಅಲ್ಲು ಅರ್ಜುನ್‌ ಕೂಡ ತೇಲುತ್ತಿದ್ದಾರೆ. ಶೀಘ್ರವೇ, ಹೊಸ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ. ಅಂದಹಾಗೆ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳುತ್ತಿರುವುದು ಸುಕುಮಾರ್.

ಮತ್ತೊಂದೆಡೆ ತಮಿಳಿನ ‘ಸುಲ್ತಾನ್‌’ ಚಿತ್ರದಲ್ಲಿ ನಟಿಸಲು ರಶ್ಮಿಕಾ ತಯಾರಿ ನಡೆಸುತ್ತಿದ್ದಾರೆ. ಕಾಲಿವುಡ್‌ನಲ್ಲಿ ಇದು ಅವರ ಮೊದಲ ಚಿತ್ರ. ಇದನ್ನು ನಿರ್ದೇಶಿಸಿರುವುದು ಬಕ್ಕಿಯರಾಜ್ ಕಣ್ಣನ್. ಈ ನಡುವೆಯೇ ರಶ್ಮಿಕಾ ಹೊಸ ಫೋಟೊಶೂಟ್‌ ಮಾಡಿಸಿದ್ದಾರೆ. ವಿವಿಧ ಭಂಗಿಯಲ್ಲಿ ಆಕೆ ಕ್ಯಾಮೆರಾಕ್ಕೆ ಪೋಸ್‌ ನೀಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. 

ಕನ್ನಡದಲ್ಲಿ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರಕ್ಕೂ ರಶ್ಮಿಕಾ ಅವರೇ ನಾಯಕಿ. ಈ ಚಿತ್ರದಲ್ಲಿ ಅವರದು ಶಿಕ್ಷಕಿಯ ಪಾತ್ರ. ಮಾರ್ಚ್‌ ಅಂತ್ಯಕ್ಕೆ ಈ ಸಿನಿಮಾ ಥಿಯೇಟರ್‌ಗೆ ಬರುವ ನಿರೀಕ್ಷೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು