ಮಂಗಳವಾರ, ಸೆಪ್ಟೆಂಬರ್ 21, 2021
27 °C

ಥಿಯೇಟರ್‌ಗೆ ಬಂದಳು ‘ರತ್ನಮಂಜರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರವತ್ತರ ದಶಕದಲ್ಲಿ ಚಿತ್ರರಸಿಕರ ಮನಸೂರೆಗೊಂಡ ಚಿತ್ರ ‘ರತ್ನಮಂಜರಿ’. ಈ ಚಿತ್ರದ ‘ಯಾರು ಯಾರು ನೀ ಯಾರು’ ಹಾಡು ಇಂದಿಗೂ ಜನರ ನಾಲಿಗೆ ಮೇಲೆ ನಲಿದಾಡುತ್ತಿದೆ. ಅಂದಹಾಗೆ ಇದೇ ಟೈಟಲ್‌ ಇಟ್ಟುಕೊಂಡು ಚಿತ್ರಮಂದಿರಕ್ಕೆ ಇದೇ ಶುಕ್ರವಾರ ಲಗ್ಗೆ ಇಡುತ್ತಿದ್ದಾಳೆ ಆಧುನಿಕ ‘ರತ್ನಮಂಜರಿ’. 

ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಅವಳ ವಿಚಿತ್ರ ನಗುವಿಗೆ ಪ್ರೇಕ್ಷಕರು ಫಿದಾ ಆಗಲಿದ್ದಾರೆ ಎನ್ನುವುದು ಚಿತ್ರತಂಡದ ಅಂಬೋಣ.

ಥ್ರಿಲ್ಲರ್‌, ಹಾರರ್‌ ಸಿನಿಮಾ ಇದು. ತೊಂಬತ್ತರ ದಶಕದಲ್ಲಿ ನಡೆದ ನೈಜ ಘಟನೆ ಆಧರಿಸಿ ಈ ಕಥೆ ಹೊಸೆಯಲಾಗಿದೆಯಂತೆ. ‘ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರೆ. ಅದರಲ್ಲಿ ರತ್ನಮಂಜರಿ ಯಾರು ಎನ್ನುವುದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು’ ಎಂದ ನಿರ್ದೇಶಕ ಪ್ರಸಿದ್ಧ್‌ ಕಥೆಯ ಬಗ್ಗೆ ಕುತೂಹಲ ಹೆಚ್ಚಿದರು.

ನಾಯಕ ರಾಜ್‍ ಚರಣ್ ಅನಿವಾಸಿ ಭಾರತೀಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣ ಪ್ರೀತಮ್‌ ತಗ್ಗಿನಮನೆ ಅವರದ್ದು. ಒಂದು ಹಾಡಿಗೆ ನಟ ಪುನೀತ್‍ ರಾಜ್‍ಕುಮಾರ್ ಕಂಠ ದಾನ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು