ಮುಂಬೈ: ತೆಲುಗು ನಟ ರವಿತೇಜ ಅವರ ಅಭಿನಯದ ಮುಂಬರುವ ಚಿತ್ರ 'ಟೈಗರ್ ನಾಗೇಶ್ವರ ರಾವ್' ಇದೇ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ.
ಈ ಕುರಿತು ಟ್ವೀಟ್ ಮಾಡಿರುವ ನಟ ಅನುಪಮ್ ಖೇರ್, 'ಟೈಗರ್ ನಾಗೇಶ್ವರ ರಾವ್' ಚಿತ್ರದ ಬಿಡುಗಡೆ ದಿನಾಂಕದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
‘ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದು, ನನ್ನ ಆತ್ಮೀಯ ರವಿತೇಜ ನಟಿಸಿರುವ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಲು ಸಿದ್ಧವಾಗಿದೆ ಎಂದು ಅವರು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ.
'ಟೈಗರ್ ನಾಗೇಶ್ವರ ರಾವ್' ಚಿತ್ರ ರವಿತೇಜ ಅವರ ಮೊದಲ ಪ್ಯಾನ್-ಇಂಡಿಯಾ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು ವಂಶಿ ನಿರ್ದೇಶಿಸಿದ್ದಾರೆ.
'ಟೈಗರ್ ನಾಗೇಶ್ವರ ರಾವ್' ಚಿತ್ರವು 70ರ ದಶಕದ ಕುಖ್ಯಾತ ಕಳ್ಳನ ಜೀವನಚರಿತ್ರೆ ಕುರಿತಾಗಿದೆ. ರವಿತೇಜ ಅವರ ಗೆಟಪ್ ಈ ಹಿಂದೆಂದೂ ನೋಡಿರದ ಹಾಗೆ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರವಿತೇಜಗೆ ನಾಯಕಿಯರಾಗಿ ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ತೆರೆ ಹಂಚಿಕೊಳ್ಳಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.