ಮಂಗಳವಾರ, ನವೆಂಬರ್ 24, 2020
19 °C

ಹೊಸ ಚಿತ್ರದ ಸಿದ್ಧತೆಯಲ್ಲಿ ಮಾಸ್‌ ಮಹಾರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗಿನ ಮಾಸ್‌ ಮಹಾರಾಜ ಎಂದು ಕರೆಸಿಕೊಳ್ಳುವ ರವಿ ತೇಜ ಅವರು ಹೊಸ ಕಾಮಿಡಿ ಥ್ರಿಲ್ಲರ್‌ ಚಿತ್ರವೊಂದಕ್ಕೆ ಸಿದ್ಧತೆ ನಡೆಸಿದ್ದಾರೆ. ಅವರ ಸಾಹಸಮಯ ಹೊಸ ಚಿತ್ರ ‘ಕ್ರಾಕ್‌ʼ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಅದರ ಕೆಲಸಗಳೂ ಭರದಿಂದ ಸಾಗಿವೆ.  ಅದರ ನಡುವೆಯೇ ಈ ಸಿದ್ಧತೆ ನಡೆದಿದೆ. ಕ್ರಾಕ್‌ ಚಿತ್ರದ ಕೆಲಸಗಳು ಮುಗಿದ ನಂತರ ಅವರು ಹೊಸ ಚಿತ್ರದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. 

ಈ ಚಿತ್ರವನ್ನು ತ್ರಿನಾದ ರಾವ್‌ ನಕ್ಕಿನ ಅವರು ನಿರ್ದೇಶಿಸುತ್ತಿದ್ದಾರೆ. ತ್ರಿನಾದ ಅವರು ‘ನೇನು ಲೋಕಲ್‌ʼ ಹೆಸರಿನ ಹಾಸ್ಯ, ಥ್ರಿಲ್ಲರ್‌ ಪ್ರಧಾನ ಚಿತ್ರ ನಿರ್ಮಿಸಿದವರು. ಹೊಸ ಚಿತ್ರದಲ್ಲಿ ರವಿತೇಜ ಅವರದ್ದು ಪತ್ತೆದಾರನ ಪಾತ್ರ. ಈ ಚಿತ್ರಕ್ಕೆ ಹಾಲು ಬಿಳುಪಿನ ಚೆಲುವೆ ತಮನ್ನಾ ಭಾಟಿಯಾ ಅವರನ್ನು ನಾಯಕಿಯಾಗಿ ಕರೆತರಲು ಚಿಂತನೆ ನಡೆದಿದೆ ಎಂದು ತಂಡದ ಮೂಲಗಳು ಹೇಳಿವೆ. ನಾಯಕ- ನಿರ್ದೇಶಕರ ಸಂಯೋಜನೆ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳದ್ದು. ಚಿತ್ರವನ್ನು ಕೊನೆರು ಸತ್ಯನಾರಾಯಣ ನಿರ್ಮಿಸುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.