ಬುಧವಾರ, ಮಾರ್ಚ್ 3, 2021
29 °C

ಅಂಬರೀಷ್ ಮೊದಲ ವರ್ಷದ ಪುಣ್ಯತಿಥಿ: ಸಮಾಧಿ ಮುಂದೆ ಕಣ್ಣೀರಿಟ್ಟ ಸುಮಲತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಗುರುವಾರ ‘ರೆಬೆಲ್‌ ಸ್ಟಾರ್‌’ ಅಂಬರೀಷ್ ಅವರ ಮೊದಲ ವರ್ಷದ ಪುಣ್ಯತಿಥಿ ನಡೆಯಿತು. ಅಂಬರೀಷ್‌ ಅವರ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌, ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅವರು, ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು. 

ಅಂಬರೀಷ್‌ಗೆ ಇಷ್ಟವಾದ ಬಿರಿಯಾನಿ, ತಲೆಕಾಲು ಮಾಂಸ, ಪುಳಿಯೊಗರೆ, ಇಡ್ಲಿ, ಬಾದುಷಾ, ಉಪ್ಪಿಟ್ಟು, ಪೊಂಗಲ್‌, ಕೀರು, ಕಡುಬು ಸೇರಿದಂತೆ ವಿವಿಧ ಬಗೆಯ ಸಿಹಿತಿನಿಸುಗಳನ್ನು ಇಡಲಾಗಿತ್ತು. ಇದೇ ವೇಳೆ ಅಂಬಿಯನ್ನು ನೆನೆದು ಸುಮಲತಾ ಕಣ್ಣೀರು ಹಾಕಿದರು.

‘ನಾನು ಎಲ್ಲಿಗೆ ಹೋದರು ಅಂಬರೀಷ್‌ ನೆನಪಾಗುತ್ತಾರೆ. ಪ್ರತಿಕ್ಷಣವೂ ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ’ ಎಂದ ಅವರು, ವಿಧಾನಸಭಾ ಉಪ ಚುನಾವಣೆ ಬಗ್ಗೆ ಮಾತನಾಡಲು ನಿರಾಕರಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು