ಶುಕ್ರವಾರ, ಡಿಸೆಂಬರ್ 3, 2021
25 °C

ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ರಿಷಬ್‌ ಶೆಟ್ಟಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಹೀಗೆಂದು ಸಿನಿಮಾ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. 

ಭಾಷಾ ಸೂಕ್ಷ್ಮ ಪ್ರದೇಶವಾಗಿರುವ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕೋವಿಡ್‌ ನಿಯಮಗಳಿಗೆ ಒಳಪಟ್ಟು ಆಚರಣೆ ಮಾಡಬೇಕಾಗಿ ಇತ್ತೀಚಿನ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ರಾಜ್ಯೋತ್ಸವದ ಅದ್ಧೂರಿ ಆಚರಣೆಗೆ ಅವಕಾಶ ಕೋರಿ ಈಗಾಗಲೇ ಕನ್ನಡ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿವೆ.  

ಹೀಗಿರುವಾಗಲೇ ಟ್ವೀಟ್‌ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ, ಕನ್ನಡ ರಾಜ್ಯೋತ್ಸವದ ಸಂಭ್ರಮದ ಆಚರಣೆಗೆ ಬೆಂಬಲ ನೀಡಿದ್ದಾರೆ.  

‘ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಆಚರಣೆ, ಇತಿಹಾಸಗಳು ಭಿನ್ನವಾದರೂ ನಾಡಿಗೆ ದಸರಾ ಜತೆಗಿನ ಭಾವನಾತ್ಮಕ ಸಂಬಂಧವೇ ರಾಜ್ಯೋತ್ಸವದೊಂದಿಗೂ ಇದೆ. ಮೈಸೂರಿನ ಸಂಭ್ರಮವೇ ಬೆಳಗಾವಿಯಲ್ಲೂ ಮುಂದುವರೆಯಲು ಮಾನ್ಯ ಮುಖ್ಯಮಂತ್ರಿಗಳು ಅವಕಾಶ ನೀಡಬೇಕಾಗಿ ವಿನಂತಿ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಇದರ ಜೊತೆಗೆ,  #ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ ಎಂಬ ಹ್ಯಾಷ್‌ ಟ್ಯಾಗ್‌ ಅನ್ನೂ ಅವರು ತಮ್ಮ ಟ್ವೀಟ್‌ನಲ್ಲಿ ಸೇರಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು