ಶನಿವಾರ, ಆಗಸ್ಟ್ 20, 2022
21 °C

ರಿಷಬ್‌ ಶೆಟ್ಟಿಯ ಹೊಸ ಸಿನಿಮಾ ಟೈಟಲ್‌ ನಾಳೆ ಲಾಂಚ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಯೋಗಶೀಲ ನಿರ್ದೇಶಕ ಮತ್ತು ನಟ ರಿಷಬ್‌ ಶೆಟ್ಟಿ ಸದ್ದಿಲ್ಲದೆ ಮತ್ತೊಂದು ಸಿನಿಮಾ ಪೂರ್ಣಗೊಳಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಅವರು ಈ ಚಿತ್ರದ ಬಗ್ಗೆ ರಹಸ್ಯ ಕಾಯ್ದುಕೊಂಡು ಸಿನಿಪ್ರಿಯರು ಮತ್ತು ಅವರ ಅಭಿಮಾನಿಗಳ ಕುತೂಹಲವನ್ನು ಕೆರಳುವಂತೆ ಮಾಡಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ಮತ್ತು ಚಿತ್ರದ ಶೀರ್ಷಿಕೆಯನ್ನು ನಾಳೆ ಅಂದರೆ ಸೆ.10ರಂದು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

‘Surprise ಅಂತ ಹಾಕಿದ್ವಲ್ಲ... ಅದ್ಕೆ ಸ್ವಲ್ಪ ಬೇಗನೇ ಬಂದ್ವಿ. Sorry, ಜಾಸ್ತಿ ದಿನ ಮನೇಲಿ ಸುಮ್ನೆ ಕುತ್ಕೊಳ್ಳೊಕ್ ಆಗ್ದೆ ಸಿನೆಮಾ ಮಾಡ್ಕೊಂಡ್ ಬಂದಿದ್ದೀವಿ, ಅದ್ನ ಹೇಳೋಣ ಅಂತ ಬಂದಿದ್ದು. Title, Firstlook ಹಾಗೂ ಉಳಿದ ವಿವರಗಳೊಂದಿಗೆ ನಾಳೆ ಮತ್ತೆ ಭೇಟಿಯಾಗೋಣ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಜತೆಗೆ ಕಾಳುಮೆಣಸಿನ ಬಳ್ಳಿ ತುಂಬಿರುವ ಕಾಫಿ ತೋಟದ ನಡುವೆ ನಾಯಕ– ನಾಯಕಿ ನೃತ್ಯ ಮಾಡಿರುವ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.

 

 

‘ಬೆಲ್‌ಬಾಟಂ’ ಸಿನಿಮಾದಲ್ಲಿ ರೆಟ್ರೊ ಶೈಲಿಯಲ್ಲಿ ಕಾಣಿಸಿಕೊಂಡಿದ್ದ ರಿಷಬ್‌ ಶೆಟ್ಟಿ ಈಗ ತಮ್ಮ ಹೊಸ ಸಿನಿಮಾದಲ್ಲೂ ರೆಟ್ರೊ ಶೈಲಿಯಲ್ಲೇ ಕಾಣಿಸಿಕೊಂಡಿರುವ ಸುಳಿವು ನೀಡಿದ್ದಾರೆ. ‘ಬೆಲ್‌ಬಾಟಂ’ ಸಿನಿಮಾ ಹಿಂದಿಗೆ ರಿಮೇಕ್‌ ಆಗುತ್ತಿದ್ದು, ಹಿಂದಿ ರಿಮೇಕ್‌ನಲ್ಲಿ ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ನಟಿಸುತ್ತಿದ್ದಾರೆ. 

 

ಈ ಚಿತ್ರದಲ್ಲಿ ರಿಷಬ್ ನಾಯಕನಾಗಿ ನಟಿಸಿದ್ದು, ನಾಯಕಿಯಾಗಿ ‘ಮಗಳು ಜಾನಕಿ’ ಧಾರಾವಾಹಿಯ ಗಾನವಿ ಲಕ್ಷ್ಮಣ್‌ ನಟಿಸಿದ್ದಾರೆ. ರಿಷಬ್‌ ಅವರ ಸ್ನೇಹಿತ ಪ್ರಮೋದ್‌ ಶೆಟ್ಟಿ ಮತ್ತು ‘ಉಗ್ರಂ’ ಸಿನಿಮಾ ಖ್ಯಾತಿಯ ಮಂಜುನಾಥ್‌ ಗೌಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ, ವಿಕ್ರಮ್‌ ನೃತ್ಯಸಂಯೋಜನೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು