ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣವೀರ್ ಸಿಂಗ್- ಆಲಿಯಾ ಭಟ್ ಕಾಂಬಿನೇಶನ್‌ನಲ್ಲಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

ಅಕ್ಷರ ಗಾತ್ರ

ನವದೆಹಲಿ: ಇಂದು 36ನೇ ವಸಂತಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದು ಅಭಿಮಾನಿಗಳಿಗೆ ಸಂತೋಷದ ವಿಚಾರವೊಂದನ್ನು ನೀಡಿದ್ದು, ಕರಣ್ ಜೋಹರ್ ನಿರ್ದೇಶನದಲ್ಲಿ ತಮ್ಮ ಹೊಸ ಚಿತ್ರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮೂಡಿಬರುತ್ತಿರುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಸಣ್ಣ ಪ್ರೊಮೊ ವಿಡಿಯೊವೊಂದನ್ನು ಹಂಚಿಕೊಂಡಿರುವ ಅವರು, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ತಮ್ಮೊಂದಿಗೆ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಶೀರ್ಷಿಕೆಯಲ್ಲಿ ಹೇಳಿದ್ದಾರೆ.

ಜೋಯಾ ಅಕ್ತರ್ ಅವರ ಗಲ್ಲಿ ಬಾಯ್ ಸಿನಿಮಾದ ಬಳಿಕ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದೆ. 'ನನ್ನ ವಿಶೇಷ ದಿನದಂದು ವಿಶೇಷ ಘೋಷಣೆ! 'ನನ್ನ ಬೆರಗುಗೊಳಿಸುವ ಸೂಪರ್‌ನೋವಾ ಆಲಿಯಾ ಭಟ್ ಮತ್ತು ದೂರದೃಷ್ಟಿಯುಳ್ಳ ನಿರ್ದೇಶಕ ಕರಣ್ ಜೋಹರ್ ಅವರೊಂದಿಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯನ್ನು ಘೋಷಿಸುತ್ತಿದ್ದೇನೆ. ಚಿತ್ರಕ್ಕೆ ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ ಕಥೆ ಬರೆದಿದ್ದಾರೆ. 2022 ರಲ್ಲಿ ನಿಮ್ಮನ್ನು ಮೋಡಿ ಮಾಡಲು ಬರುತ್ತಿದೆ! #RockyAurRaniKiPremKahani #RRKPK' ಎಂದು ರಣವೀರ್ ಸಿಂಗ್ ಬರೆದುಕೊಂಡಿದ್ದಾರೆ.

ಇನ್ನು ಇದೇ ವಿಡಿಯೊವನ್ನು ನಿರ್ದೇಶಕ ಕರಣ್ ಜೋಹರ್ ಮತ್ತು ನಟಿ ಆಲಿಯಾ ಭಟ್ ಕೂಡ ಹಂಚಿಕೊಂಡಿದ್ದಾರೆ. 'ಹೌದು, ಇದು ಪ್ರೇಮ ಕಥೆ, ಆದರೆ ಸಾಮಾನ್ಯ ಪ್ರೇಮ ಕಥೆಯಲ್ಲ' ಎಂದು ಕರಣ್ ಬರೆದುಕೊಂಡಿದ್ದಾರೆ.

'ನನ್ನ ನೆಚ್ಚಿನ ಜನರೊಂದಿಗೆ ಅಸಾಧಾರಣ ಪ್ರೇಮಕಥೆ! ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಕರಣ್ ಜೋಹರ್ ನಿರ್ದೇಶಿಸುತ್ತಿರುವ ಮತ್ತು ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ ಕಥೆ ಬರೆದಿದ್ದಾರೆ. 2022 ರಲ್ಲಿ ತೆರೆಗೆ ಬರಲು ಎಲ್ಲಾ ಸಿದ್ಧವಾಗಿದೆ' ಎಂದು ಆಲಿಯಾ ಸಂತಸ ವ್ಯಕ್ತಪಡಿಸಿದ್ದಾರೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯೊಂದಿಗೆ ರಣವೀರ್ ಸಿಂಗ್ ಅವರು ತಮ್ಮ ಮುಂದಿನ ಚಿತ್ರ '83' ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT