ಅದೃಷ್ಟ ಇಲ್ಲಾರೀ...; ರೋಷನ್‌ ಅಬ್ದುಲ್‌ ರವೂಫ್‌

ಮಂಗಳವಾರ, ಮೇ 21, 2019
24 °C
‘ಒರು ಅಡಾರ್ ಲವ್‌’ನ ನಟ

ಅದೃಷ್ಟ ಇಲ್ಲಾರೀ...; ರೋಷನ್‌ ಅಬ್ದುಲ್‌ ರವೂಫ್‌

Published:
Updated:
Prajavani

‘ಪ್ರತಿಭೆ ಇದ್ದರೆ ಸಾಕು. ಚಿತ್ರರಂಗದಲ್ಲಿ ಯಶಸ್ಸು ಗಳಿಸಬಹುದು ಎಂಬ ನಂಬಿಕೆ ಸುಳ್ಳಾಗಿದೆ. ಪ್ರತಿಭೆಯೊಂದಿಗೆ ಅದೃಷ್ಟವೂ ಇದ್ದರೆ ಮಾತ್ರ ಗೆಲ್ಲಲು ಸಾಧ್ಯ’.

– ರಾತ್ರಿ ಬೆಳಗಾಗುವುದರೊಳಗೆ ಪ್ರಿಯಾ ಪ್ರಕಾಶ್‌ ವಾರಿಯರ್‌ಗೆ ತಾರಾ ಮೌಲ್ಯ ತಂದುಕೊಟ್ಟ ಕಣ್ಸನ್ನೆಯ ವಿಡಿಯೊದಲ್ಲಿದ್ದ ಹುಡುಗ ರೋಷನ್‌ ಅಬ್ದುಲ್‌ ರವೂಫ್‌ ಅವರಿಗೆ ಈಗ ಅರಿವಾಗಿರುವ ವಾಸ್ತವ ಇದು.‌ 

‘ಪ್ರಿಯಾಗೆ ಅದೃಷ್ಟವೂ ಇರುವ ಕಾರಣ ಅವಳ ಪ್ರತಿಭೆಗೆ ಬೆಲೆ ಸಿಕ್ಕಿದೆ. ಅವಳು ನನ್ನ ಗೆಳತಿ. ‘ಒರು ಅಡಾರ್ ಲವ್‌’ನಲ್ಲಿ ನಟಿಸಿದ ನಾಲ್ಕೂ ಮಂದಿ ಹೊಸಬರೇ. ಹಾಗಿರುವಾಗ ಒಬ್ಬರನ್ನೊಬ್ಬರು ಹೋಲಿಸಿಕೊಳ್ಳುವುದು ತೀರಾ ಬಾಲಿಶ. ಹಾಗಂತ ಪ್ರಿಯಾಗೆ ಸಿಕ್ಕಿದ ಅವಕಾಶಗಳು ನಮಗೆ ಸಿಗದೇ ಇರುವುದಕ್ಕೆ ಅದೃಷ್ಟದಾಟವೇ ಕಾರಣ’ ಎಂಬುದು ರೋಷನ್‌ ಅಭಿಪ್ರಾಯ.

‘ಒರು ಒಡಾರ್‌ ಲವ್‌’ನಲ್ಲಿ ನಟಿಸಿದಾಗ ರೋಷನ್‌ಗೆ ಇನ್ನೂ 18ರ ಹರೆಯ. ಇದೇ ಏಪ್ರಿಲ್‌ಗೆ ಅವರು 20ಕ್ಕೆ ಕಾಲಿಡುತ್ತಾರೆ. ಒಂದೇ ಚಿತ್ರ ಅವರಿಗೆ ಬದುಕಿನ ಹಲವು ಸತ್ಯಗಳನ್ನೂ, ಜಗತ್ತನ್ನೂ ಪರಿಚಯಿಸಿಕೊಟ್ಟಿದೆಯಂತೆ. ಎಲ್ಲಿ ಹೋದರೂ ಜನ ಮುತ್ತಿಕೊಂಡು ಸೆಲ್ಫಿಗಾಗಿ ಮುಗಿಬೀಳುತ್ತಾರೆ ಹಾಗಂತ ತಾನೊಬ್ಬ ಸೆಲೆಬ್ರಿಟಿ ಎಂಬ ಭ್ರಮೆ ಈ ಯುವಕನಿಗಿಲ್ಲ.

ಶಾರುಖ್‌ ಖಾನ್‌ನ ದೊಡ್ಡ ಅಭಿಮಾನಿಯಾದ ರೋಷನ್‌ಗೆ ನೃತ್ಯವೆಂದರೆ ಪ್ರಾಣ. ಚಿತ್ರರಂಗಕ್ಕೆ ಪರಿಚಯಗೊಂಡಿದ್ದೂ ಡಿ4ಡಿ ಎಂಬ ರಿಯಾಲಿಟಿ ಶೋ ಮೂಲಕ. ರೋಷನ್‌ಗೆ ಯಾವುದೇ ಭಾಷೆಯ ಚಿತ್ರದಿಂದ ಅವಕಾಶ ಬಂದರೂ ಒಪ್ಪಿಕೊಳ್ಳುವ ಉಮೇದು ಇದೆ. ಆದರೆ ಅಫರ್‌ಗಳು ಬರಬೇಕೆಂದರೆ ಅದೃಷ್ಟ ಇರಬೇಕಲ್ಲ ಎಂಬುದು ಅವರ ನಂಬಿಕೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !