ಶುಕ್ರವಾರ, ಫೆಬ್ರವರಿ 26, 2021
32 °C

ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್‌ನಲ್ಲಿ ಆರ್‌ಆರ್‌ಆರ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೌದ್ರಂ ರಣಂ ರುಧಿರಂ (ಆರ್‌ಆರ್‌ಆರ್‌) ಚಿತ್ರದ ಅಂತಿಮ ಹಂತದ ಶೂಟಿಂಗ್‌ ನಡೆಯುತ್ತಿದೆ. ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ಎಸ್‌ಎಸ್‌ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಎನ್‌ಟಿಆರ್‌ ಕೋಮರಾಮ್‌ ಭೀಮ್ ಪಾತ್ರಕ್ಕೆ ಬಣ್ಣ ಹಚ್ಚಿದರೆ, ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ರಾಮ್ ಚರಣ್ ಬಣ್ಣ ಹಚ್ಚಿದ್ದಾರೆ. ಅಂತಿಮ ಹಂತದ ಶೂಟಿಂಗ್‌ ಸೆಟ್‌ನಲ್ಲಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ರಾಜಮೌಳಿ.

ಈ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ‘ಆರ್‌ಆರ್‌ಆರ್ ಕ್ಲೈಮಾಕ್ಸ್ ಶೂಟ್‌ ಆರಂಭವಾಗಿದೆ. ನಮ್ಮ ರಾಮರಾಜು ಹಾಗೂ ಭೀಮ್‌ ಇಬ್ಬರೂ ಒಂದಾಗಿ ಸೆಟ್‌ನಲ್ಲಿ ಸೇರಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

 

 

ಆರ್‌ಆರ್‌ಆರ್ ಸಿನಿಮಾ 2021ರ ಜನವರಿ 8ಕ್ಕೆ ಬಿಡುಗಡೆಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಶೂಟಿಂಗ್‌ಗೆ ಬ್ರೇಕ್‌ ಹಾಕಿದ್ದು ಬಿಡುಗಡೆ ದಿನಾಂಕವನ್ನೂ ಮುಂದಕ್ಕೆ ಹಾಕಲಾಗಿದೆ. ಆದರೆ ಸದ್ಯಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಧಾರ ಮಾಡಿಲ್ಲ ಚಿತ್ರತಂಡ.

 

ಈ ಚಿತ್ರಕ್ಕೆ 1920ರ ಕಾಲದ ಸೆಟ್‌ ಹಾಕಲಾಗಿದ್ದು, ತಮ್ಮ ತಂದೆ ಕೆವಿ ವಿಜಯೇಂದ್ರ ಪ್ರಸಾದ್ ಅವರ ಜೊತೆ ಸೇರಿ ರಾಜಮೌಳಿ ಚಿತ್ರಕಥೆ ಬರೆದಿದ್ದಾರೆ.

ಈ ಚಿತ್ರದಲ್ಲಿ ಅಜಯ್‌ ದೇವಗನ್‌, ಆಲಿಯಾ ಭಟ್‌, ಒಲಿವಿಯಾ ಮೊರಿಸ್‌, ರೇ ಸ್ಟೀವನ್‌ಸನ್‌ ಹಾಗೂ ಅಲಿಸನ್ ಡೂಡಿ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು