ಗುರುವಾರ , ಮಾರ್ಚ್ 4, 2021
26 °C

‘ಆರ್‌ಆರ್‌ಆರ್‌’ ವಿದೇಶ ಪ್ರದರ್ಶನದ ಹಕ್ಕು ₹ 70 ಕೋಟಿಗೆ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ನಿರ್ಮಾಣದ ಆರ್‌ಆರ್‌ಆರ್‌ ಚಿತ್ರ ಬಿಡುಗಡೆಗೂ ಮೊದಲೇ ₹ 70 ಕೋಟಿ ರೂಪಾಯಿಗೆ ದುಬೈಯಲ್ಲಿ ಪ್ರದರ್ಶನಕ್ಕಾಗಿ ಮಾರಾಟವಾಗಿದೆ. ವಿದೇಶದಲ್ಲಿ ಚಿತ್ರದ ವಿತರಣೆಯ ಹಕ್ಕನ್ನು ಫಾರ್ಸ್‌ ಫಿಲ್ಮ್ಸ್‌ ಸಂಸ್ಥೆ ಖರಿದಿಸಿದೆ. ಸದ್ಯಕ್ಕೆ ನಿರ್ಮಾಪಕರಿಗೆ ಸಿಕ್ಕ ದೊಡ್ಡ ಮೊತ್ತ ಇದು ಎಂಬ ವಿಶ್ಲೇಷಣೆ ಟಾಲಿವುಡ್‌ನಲ್ಲಿ ಕೇಳಿಬಂದಿದೆ. 

ಚಿತ್ರವನ್ನು ಡಿವಿವಿ ದಾನಯ್ಯ ಅವರು ನಿರ್ಮಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ಇದ್ದಾರೆ. ಕೊರೊನಾ ಕಾರಣದಿಂದಾಗಿ ಜನ ಚಿತ್ರ ಮಂದಿರಗಳತ್ತ ಬರುತ್ತಿಲ್ಲ. ಯಾವ ಚಿತ್ರ ತಂಡವೂ ತಾನು ಹೂಡಿದ ಬಂಡವಾಳದ ಕನಿಷ್ಠ ಮೊತ್ತವನ್ನೂ ಪಡೆಯುವ ಖಾತ್ರಿ ಹೊಂದಿಲ್ಲ. ಸನ್ನಿವೇಶ ಹೀಗಿರುವಾಗ ಬೃಹತ್‌ ಮೊತ್ತ ಹಿಂದಕ್ಕೆ ಪಡೆಯುವುದು ಹೇಗೆ ಎಂಬ ಸವಾಲು ರಾಜಮೌಳಿ ಅವರಿಗೂ ಎದುರಾಗಿದೆ.

‘ಆರ್‌ಆರ್‌ಆರ್‌’ ಕಾದಂಬರಿ ಆಧರಿತ ಚಿತ್ರ. ಅಲ್ಲುರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನಗಾಥೆಯನ್ನ ಹೊಂದಿದೆ. ಅಜಯ್‌ ದೇವಗನ್‌, ಅಲಿಯಾಭಟ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಳೆದ ತಿಂಗಳಿನಿಂದ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಮತ್ತೆ ಆರಂಭವಾಗಿದೆ. ಮತ್ತೆ ಚಿತ್ರೀಕರಣದ ಮುಂದುವರಿದ ಸಂಗತಿಯನ್ನು ಚಿತ್ರತಂಡ ವಿಶೇಷ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು