ಮಂಗಳವಾರ, ಜುಲೈ 27, 2021
25 °C

‘ಆರ್‌ಆರ್‌ಆರ್‌’ ಚಿತ್ರೀಕರಣ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌(ಪಿಟಿಐ): ಚಿತ್ರ ನಿರ್ಮಾಪಕ ಎಸ್‌.ಎಸ್‌.ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್‌’ (ರೈಸ್‌–ರೋರ್‌–ರಿವೋಲ್ಟ್‌) ಚಿತ್ರೀಕರಣ ಪುನರಾರಂಭಗೊಂಡಿದೆ. ತೆಲಂಗಾಣದಲ್ಲಿ ಲಾಕ್‌ಡೌನ್‌ ತೆರವಾಗುತ್ತಿದ್ದಂತೆಯೇ ಚಿತ್ರತಂಡ ತನ್ನ ಕೆಲಸಗಳಲ್ಲಿ ಮತ್ತೆ ತೊಡಗಿಕೊಂಡಿದೆ. ಮೇ 12ರಿಂದ ಚಿತ್ರ ಚಟುವಟಿಕೆಗಳು ಇಲ್ಲಿ ಸ್ಥಗಿತಗೊಂಡಿದ್ದವು.

ದಕ್ಷಿಣ ಭಾರತದ ಖ್ಯಾತ ನಟ ರಾಮ್‌ ಚರಣ್‌ ಅವರು ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಕೇಶ ವಿನ್ಯಾಸಕರಾದ ಅಲೀಂ ಹಕೀಂ ಅವರು ರಾಮ್‌ ಚರಣ್‌ ಅವರೊಂದಿಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ಇಂದು ಹೈದರಾಬಾದ್‌ನಲ್ಲಿ, ಲಾಕ್‌ಡೌನ್ 2.0 ಅನ್ನು ತೆಗೆದುಹಾಕಲಾಗಿದೆ ಮತ್ತು ಚಲನಚಿತ್ರ ಚಟುವಟಿಕೆಗಳು ಮತ್ತೆ ಚಿಗುರಿವೆ. ರಾಜಾಮೌಳಿ ಅವರ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರಕ್ಕಾಗಿ ಸೂಪರ್‌ ಸ್ಟಾರ್‌ ರಾಮ್‌ಚರಣ್‌ ಅವರಿಗೆ ಕ್ಷೌರ ಮಾಡುವ ಮೂಲಕ ನನ್ನ ದಿನವನ್ನು ಆರಂಭಿಸಿದೆ’ ಎಂದು ಹಕೀಂ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಜೂನಿಯರ್‌ ಎನ್‌.ಟಿ.ರಾಮರಾವ್‌ ನಟಿಸಿದ್ದಾರೆ.

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್‌ ಅವರ ಜೀವನವನ್ನು ಆಧರಿಸಿದ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು