ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಳೀಧರನ್‌ ಜೀವನಾಧಾರಿತ ‘800’ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿದ ಸಚಿನ್

Published 5 ಸೆಪ್ಟೆಂಬರ್ 2023, 13:44 IST
Last Updated 5 ಸೆಪ್ಟೆಂಬರ್ 2023, 13:44 IST
ಅಕ್ಷರ ಗಾತ್ರ

ಮುಂಬೈ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ‘800’ ಸಿನಿಮಾದ ಟ್ರೇಲರ್ ಅನ್ನು ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಅವರು ಇಂದು (ಮಂಗಳವಾರ) ಬಿಡುಗಡೆಗೊಳಿಸಿದರು.

ಮುಂಬೈನಲ್ಲಿ ನಡೆದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಶ್ರೀಲಂಕಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸನತ್‌ ಜಯಸೂರ್ಯ ಅವರು ಕೂಡ ಹಾಜರಿದ್ದರು.

ಈ ವೇಳೆ ಮಾತನಾಡಿದ ಸಚಿನ್, ‘ಇವರಿಬ್ಬರ ಜತೆ ಕೆಲವು ಸಮಯ ಕಳೆದಿದ್ದು ನನಗೆ ಸಂತೋಷ ತಂದಿದೆ. ಒಳ್ಳೆಯ ವಿಚಾರ ಏನೆಂದರೆ, ಹಲವು ವರ್ಷಗಳ ಬಳಿಕವೂ ನಾವು ಉತ್ತಮ ಸ್ನೇಹಿತರಾಗಿದ್ದೇವೆ. ನಾವು ಪರಸ್ಪರ ಸಂಭ್ರಮ ಹಂಚಿಕೊಂಡಿದ್ದೇವೆ. ಎಲ್ಲರೂ ಸಿನಿಮಾ ನೋಡುತ್ತಾರೆ ಎನ್ನುವ ಆಶಾಭಾವನೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT