ಶನಿವಾರ, ಆಗಸ್ಟ್ 20, 2022
22 °C

ಟ್ರೋಲ್‌ಗಳಿಗೆ ಫೋಟೊ ಬಳಕೆ: ಠಾಣೆ ಮೆಟ್ಟಿಲೇರಿದ ಸಾಧು ಕೋಕಿಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಕೀಯ, ಪ್ರಚಲಿತ ವಿದ್ಯಮಾನ ಸೇರಿ ಹಲವು ವಿಷಯಗಳನ್ನು ಟ್ರೋಲ್ ಮಾಡಲು ಸಂಗೀತ ನಿರ್ದೇಶಕರೂ ಆಗಿರುವ ನಟ ಸಾಧು ಕೋಕಿಲ ಅವರ ಫೋಟೊ ಬಳಸಿಕೊಳ್ಳಲಾಗುತ್ತಿದ್ದು, ಇದರ ವಿರುದ್ಧ ಸಾಧು ಅವರೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

‘ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ನನ್ನ ಫೋಟೊವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿ ಸಾಧು ಕೋಕಿಲ, ದಕ್ಷಿಣ ವಿಭಾಗದ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

‘ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಪಾತ್ರಗಳ ಫೋಟೊವನ್ನು ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಯಾರದ್ದೂ ಹೇಳಿಕೆಯನ್ನು ತಿರುಚಲು ಹಾಗೂ ಮತ್ತೊಬ್ಬರನ್ನು ಅವಹೇಳನಕಾರಿಯಾಗಿ ಬಿಂಬಿಸಲು ಸಾಧು ಫೋಟೊ ಬಳಸಲಾಗುತ್ತಿದೆ. ಅಂಥ ಫೋಟೊಗಳನ್ನು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಈ ಸಂಗತಿಯನ್ನು ಸಾಧು ಅವರು ದೂರಿನಲ್ಲಿ ತಿಳಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು