ಗುರುವಾರ , ಆಗಸ್ಟ್ 18, 2022
26 °C

ರಾಣಾ ದಗ್ಗುಬಾಟಿ -ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಒಟಿಟಿಯಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಲುಗು ನಟ ರಾಣಾ ದಗ್ಗುಬಾಟಿ -ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಸಿನಿಮಾ ಇಂದಿನಿಂದ (ಶುಕ್ರವಾರ) ಒಟಿಟಿಯಲ್ಲಿ ಬಿಡುಗಡೆಯಾಗಿದೆ. 

‘ನೆಟ್‌ಫ್ಲಿಕ್ಸ್‌’ನಲ್ಲಿ ಚಿತ್ರ ವೀಕ್ಷಣೆ ಲಭ್ಯವಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ವೇಣು ಉಡುಗಾಲ ನಿರ್ದೇಶನದ ಈ ಸಿನಿಮಾ ಜೂನ್ 17ರಂದು ತೆಲುಗಿನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸುರೇಶ್ ಪ್ರೊಡಕ್ಷನ್ ಮತ್ತು ಶ್ರೀಲಕ್ಷ್ಮಿ ವೆಂಕಟೇಶ್ವರ‌ ಸಿನಿಮಾಸ್ ಚಿತ್ರಕ್ಕೆ ಬಂಡವಾಳ‌ ಹೂಡಿದ್ದವು.

ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ನಕ್ಸಲ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಟನಾ ಸಾಮರ್ಥ್ಯ ಬೇಡುವ‌ ಈ ಸಿನಿಮಾದಲ್ಲಿ ಆಕೆಯದ್ದು‌ ಪ್ರಧಾನ ಪಾತ್ರ ಎಂದು ಚಿತ್ರತಂಡ ಹೇಳಿದೆ. 

ಚಿತ್ರದ ಮುಖ ಪಾತ್ರದಲ್ಲಿ ಪ್ರಿಯಾಮಣಿ ಕೂಡ ಇದ್ದಾರೆ.

ಓದಿ... 

ಸಿಂಪಲ್‌ ಸೀರೆಯಲ್ಲಿ ಗಮನ ಸೆಳೆದ ಸಾಯಿ ಪಲ್ಲವಿ: ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ 

 

ಹಾಟ್ ಫೋಟೊ ವೈರಲ್: ಬಿಸಿಲಿಗೆ ನಶೆ ಏರಿಸಿದ ತುಪ್ಪದ ಹುಡುಗಿ ‘ರಾಗಿಣಿ ದ್ವಿವೇದಿ’

ಹಾಟ್ ಫೋಟೊ ಹಂಚಿಕೊಂಡ ಮಾಳವಿಕಾ ಮೋಹನನ್: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

ಸಿದ್ಧಾರ್ಥ್ ಮಲ್ಹೋತ್ರಾ ಜತೆ ಬ್ರೇಕಪ್: ಮೌನ ಮುರಿದ ಕಿಯಾರಾ ಅಡ್ವಾಣಿ ಹೇಳಿದ್ದೇನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು