ನಟಿ ಸಾಯಿ ಪಲ್ಲವಿ ತಮ್ಮ ಮುಂದಿನ ತೆಲುಗು ಚಿತ್ರ ‘ಲವ್ ಸ್ಟೋರಿ’ಗೆ ನೃತ್ಯ ಸಂಯೋಜನೆ ಮಾಡಲಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಸಾಯಿ ಪಲ್ಲವಿ ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು ಡಾನ್ಸ್. ಮೇಕಪ್ ಇಲ್ಲದೇ ಸಹಜ ಸೌಂದರ್ಯದಲ್ಲೇ ಮುದ್ದಾಗಿ ಕಾಣುವ ಸಾಯಿ ಪಲ್ಲವಿ ನೃತ್ಯ ಎಂದರೆ ಅಭಿಮಾನಿಗಳಿಗೆ ಅದೇನೋ ಕ್ರೇಜ್. ಧನುಷ್ ಅಭಿನಯದ ಮಾರಿ 2 ಚಿತ್ರದ ‘ರೌಡಿ ಬೇಬಿ’ ಹಾಡಿನ ನೃತ್ಯದ ಮೂಲಕ ತಾನು ಅತ್ಯುತ್ತಮ ಡಾನ್ಸರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ ಸಾಯಿ ಪಲ್ಲವಿ. ಈ ಹಾಡು ಯುಟ್ಯೂಬ್‌ನಲ್ಲಿ ದಕ್ಷಿಣಭಾರತದ ಎಲ್ಲಾ ಹಾಡುಗಳ ರೆಕಾರ್ಡ್ ಬ್ರೇಕ್ ಮಾಡಿದೆ.

ಇಂತಿಪ್ಪ ಸಾಯಿ ಪಲ್ಲವಿ ಸೇಖರ್ ಕಮ್ಮುಲ ನಿರ್ದೇಶನದ ತೆಲುಗಿನ ‘ಲವ್ ಸ್ಟೋರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಷ್ಯ ಏನಪ್ಪಾ ಅಂದ್ರೆ ಚಿತ್ರದಲ್ಲಿ ಸಾಯಿ ಡಾನ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೃತ್ಯದ ಸುತ್ತಲೇ ಸುತ್ತುವ ಈ ಚಿತ್ರಕಥೆಯಲ್ಲಿ ಸಾಯಿ ಪಲ್ಲವಿಗೆಂದೇ ವಿಶೇಷ ಹಾಡನ್ನು ಮಾಡಲಿದ್ದಾರಂತೆ ನಿರ್ದೇಶಕರು. ಈ ಹಾಡನ್ನು ಸಾಯಿ ಪಲ್ಲವಿ ಸ್ವತಃ ನೃತ್ಯ ಸಂಯೋಜನೆ ಮಾಡುವ ಮನಸ್ಸು ಮಾಡಿದ್ದು, ನಿರ್ದೇಶಕರು ಈ ಕುರಿತು ಇನ್ನೂ ನಿರ್ಧಾರ ಮಾಡಿಲ್ಲವಂತೆ.

ಕೊರೊನಾ ಸೋಂಕು ಕಡಿಮೆಯಾದ ನಂತರ ಈ ಹಾಡನ್ನು ಶೂಟಿಂಗ್ ಮಾಡಲಾಗುವುದಂತೆ. ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆ ನಾಗ ಚೈತನ್ಯ ತೆರೆ ಹಂಚಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.