ಮಂಗಳವಾರ, ನವೆಂಬರ್ 12, 2019
28 °C

ನ.15ಕ್ಕೆ ಸಾಯಿ ಪಲ್ಲವಿ ಅಭಿನಯದ ‘ಅನುಕೋನಿ ಅತಿಥಿ’ ತೆರೆಗೆ

Published:
Updated:

ಸಾಯಿ ಪಲ್ಲವಿ ನಟಿಸಿರುವ ‘ಅನುಕೋನಿ ಅತಿಥಿ’ ಚಿತ್ರವು ನವೆಂಬರ್‌ 15ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಫಹಾದ್‌ ಫಸಿಲ್‌, ಪ್ರಕಾಶ್‌ ರಾಜ್‌ ಹಾಗೂ ಅತುಲ್‌ ಕುಲಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಈ ಚಿತ್ರವು ಮಲಯಾಳಂನಲ್ಲಿ ‘ಅಥಿರನ್‌’ ಎಂದು ಬಿಡುಗಡೆಯಾಗಿತ್ತು. ಈಗ ಈ ಚಿತ್ರ ತೆಲುಗಿಗೆ ಡಬ್‌ ಆಗಿ ‘ಅನುಕೋನಿ ಅತಿಥಿ’ ಎಂದು ಬಿಡುಗಡೆಯಾಗುತ್ತಿದೆ. 

ಈ ಚಿತ್ರವನ್ನು ಅಣ್ಣಾಂರೆಡ್ಡಿ ಕೃಷ್ಣಕುಮಾರ್‌ ಹಾಗೂ ಗೋವಿಂದ ರವಿ ಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಈ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಲು ಸೆನ್ಸರ್‌ ಬೋರ್ಡ್‌ ಪ್ರಮಾಣ ಪತ್ರ ಲಭಿಸಿದೆ. ನವೆಂಬರ್‌ 15ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.  1970ರಲ್ಲಿ ಕೇರಳದಲ್ಲಿ ನಡೆದ ಘಟನೆಗಳನ್ನು ಈ ಚಿತ್ರ ಒಳಗೊಂಡಿದೆ. ಸಾಯಿ ಪಲ್ಲವಿ ತೆಲುಗಿನ ಸಿನಿಪ್ರಿಯರಿಗೆ ಚಿರಪರಿಚಿತ ಮುಖ. ಹಾಗೇ ಪ್ರಕಾಶ್‌ರಾಜ್‌ ಹಾಗೂ ಅತುಲ್‌ ಕುಲಕರ್ಣಿ ಅವರೂ ಸಹ ಟಾಲಿವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಮಲಯಾಳದಲ್ಲಿ ಬಿಡುಗಡೆಗೊಂಡ ಈ ಚಿತ್ರವನ್ನು ಟಾಲಿವುಡ್‌ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ಸಾಯಿಪಲ್ಲವಿ, ರಾನಾ ದಗ್ಗುಬಾಟಿ ಜೊತೆ ‘ವಿರಾಟಪರ್ವ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಶೇಖರ್‌ ಕಮ್ಮುಲ ಅವರ ಹೊಸ ಚಿತ್ರದಲ್ಲೂ ಸಾಯಿಪಲ್ಲವಿ ನಟಿಸುತ್ತಿದ್ದು, ಇದರಲ್ಲಿ ನಾಗಚೈತನ್ಯ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)