ಬುಧವಾರ, ಸೆಪ್ಟೆಂಬರ್ 18, 2019
25 °C

ವೆಬ್ ಸೀರಿಸ್ ಪರಿಣಾಮ -ಸೈಫ್‌ ಆಲಿಖಾನ್ ಸಂಭಾವನೆ ಜಿಗಿತ‌

Published:
Updated:
Prajavani

ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಹಿಂದಿ ವೆಬ್ ಸರಣಿ ‘ಸೇಕ್ರೆಡ್ ಗೇಮ್ಸ್ 2’ ಹೆಚ್ಚು ಸದ್ದು ಮಾಡುತ್ತಿದೆ. ಈ ವೆಬ್‌ ಸರಣಿಗೆ ವಿನಿಯೋಗಿಸುತ್ತಿರುವ ಬಂಡವಾಳ ಮತ್ತು ನಟರಿಗೆ ನೀಡುತ್ತಿರುವ ಸಂಭಾವನೆ ವಿಷಯದಲ್ಲೂ ಗಮನ ಸೆಳೆಯುತ್ತಿದೆ.

ಒಂದು ಅಂದಾಜಿನ ಪ್ರಕಾರ ಪ್ರತಿ ಎಪಿಸೋಡ್‌ಗೆ ಸುಮಾರು ₹3 ಕೋಟಿಯಿಂದ ₹4 ಕೋಟಿವರೆಗೆ ವಿನಿಯೋಗಿಸಿ, 12 ಎಪಿಸೋಡ್‌ಗಳ ಸರಣಿ ಸಿದ್ಧಪಡಿಸಲಾಗಿದೆ ಎನ್ನುವ ಮಾತು ಬಿಟೌನ್‌ನಲ್ಲಿ ಚಾಲ್ತಿಯಲ್ಲಿದೆ. ಹಾಗೆಯೇ ಸೇಕ್ರೆಡ್‌ ಗೇಮ್‌ ಮೊದಲ ಆವೃತ್ತಿಯಲ್ಲಿ ನಟ ಸೈಫ್‌ ಅಲಿ ಖಾನ್‌ ಸಂಭಾವನೆ ಇದ್ದದ್ದು ಬರೀ ₹3 ಕೋಟಿ. ಈಗ ಎರಡನೇ ಆವೃತ್ತಿಯಲ್ಲಿ ಅವರ ಸಂಭಾವನೆ ₹12 ಕೋಟಿಗೆ ಏರಿಕೆಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಒಟಿಟಿ ಅಂದರೆ, ಡಿಜಿಟಲ್‌ ಪ್ಲಾಟ್‌ ಫಾರಂ ನಟರ ಸಂಭಾವನೆಯನ್ನೂ ಹೇಗೆ ಏರುಗತಿಯಲ್ಲಿ ಸಾಗುವಂತೆ ಮಾಡಿದೆ ಎನ್ನುವುದು ಸೈಫ್ ವಿಷಯದಲ್ಲಿ ಮನದಟ್ಟಾಗುತ್ತದೆ. ಈಗ ಹಲವು ನಟ– ನಟಿಯರು ಒಟಿಟಿ ಗಮನದಲ್ಲಿಟ್ಟುಕೊಂಡು ಸಿನಿಮಾ, ವೆಬ್‌ ಸರಣಿಗಳನ್ನು ಮಾಡಲು ಮುಂದಾಗಿರುವುದನ್ನು ನಾವು ನೋಡುತ್ತಿದ್ದೇವೆ.

ಹಿಂಸೆ, ಅಧ್ಯಾತ್ಮದ ‘ಪವಿತ್ರ ಆಟ’ದ ಕಥಾಹಂದರದ ಸೇಕ್ರೆಡ್‌ ಗೇಮ್ಸ್‌ ಎರಡನೇ ಸೀಸನ್ ಅನುರಾಗ್ ಹಾಗೂ ನೀರಜ್ ಘಾಯ್ವಾನ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಗ್ಯಾಂಗ್‌ಸ್ಟರ್ ಗಣೇಶ ಗಾಯತೊಂಡೆ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಪೊಲೀಸ್ ಅಧಿಕಾರಿ ಸರ್ತಾಜ್ ಸಿಂಗ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದು, ಈ ವೆಬ್‌ ಸರಣಿ ವೀಕ್ಷಕರನ್ನು ಮೋಡಿ ಮಾಡುತ್ತಿದೆ. 

ಸೀಸನ್ ಎರಡರಲ್ಲಿ ಗುರೂಜಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಮಿಂಚಿದ್ದು, ರಣವೀರ್ ಶೋರೆ, ಜತಿನ್ ಸರ್ನಾ, ಅನುಪ್ರಿಯ ಗೊಯೆಂಕಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸೀಸನ್ ಒಂದರಲ್ಲಿನ ಕಥೆ ಮುಂಬೈ ನಗರ ಕೇಂದ್ರೀಕರಿಸಿದ್ದರೆ, ಎರಡನೇ ಆವೃತ್ತಿಯ ಕಥೆ ಕೀನ್ಯಾ ದೇಶಕ್ಕೂ ವಿಸ್ತರಿಸಿದೆ.

Post Comments (+)