ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿಖಾನ್ ಮತ್ತೊಮ್ಮೆ ಅಭಿಮಾನಿಗಳನ್ನು 90ರ ದಶಕಕ್ಕೆ ಕರೆದೊಯ್ಯಲು ಸಜ್ಜಾಗುತ್ತಿದ್ದಾರೆ. 1994ರಲ್ಲಿ ತೆರೆಕಂಡ, ಸೈಫ್ ಆಲಿ ಖಾನ್ ನಟಿಸಿರುವ ‘ಯೇ ದಿಲ್ಲಗಿ’ ಚಿತ್ರದ ‘ಓಲೇ ಓಲೇ’ ಹಾಡು ದೊಡ್ಡ ಹಿಟ್ ಆಗಿತ್ತು.ಈಗ ಮತ್ತೊಮ್ಮೆ ಸೈಫ್ ಅದೇ ಹಾಡಿನ ಹೊಸ ವರ್ಷನ್ಗೆ ಹೆಜ್ಜೆ ಹಾಕಲಿದ್ದಾರೆ.

ಈಚೆಗೆಬಾಲಿವುಡ್ನಲ್ಲಿ ಹಳೆ ರಿಮಿಕ್ಸ್ ಹಾಡುಗಳು ಹೆಚ್ಚಾಗಿ ಬರುತ್ತಿದೆ. ಆ ಪಟ್ಟಿಗೆ ಸೈಫ್ ಅಲಿಖಾನ್ನ ‘ಓಲೇ ಓಲೇ’ ಹಾಡು ಕೂಡ ಸೇರುತ್ತಿದೆ.ಜನವರಿ 31ರಂದು ಸೈಫ್ ಅಲಿ ಖಾನ್ ಮತ್ತು ಟಬು ಅಭಿನಯದ ‘ಜವಾನಿ ಜಾನೇಮನ್’ ಚಿತ್ರ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ‘ಯೇ ದಿಲ್ಲಗಿ’ಯ ಜನಪ್ರಿಯ ಹಾಡು ‘ಓಲೇ ಓಲೇ’ ರಿಮಿಕ್ಸ್ ಹಾಡು ಇರಲಿದೆ. ಈ ಹಾಡಿಗೆ ತನಿಷ್ಕ್ ಬಾಗ್ಚಿ ಸಂಗೀತ ನಿರ್ದೇಶನವಿದೆ ಮತ್ತು ಯಶ್ ನಾರ್ವೆಕರ್ ಹಾಡನ್ನು ಹಾಡಿದ್ದಾರೆ. ಮೂಲ ಹಾಡನ್ನು ಅಭಿಜೀತ್ ಭಟ್ಟಾಚಾರ್ಯ ಹಾಡಿದ್ದರು.

ಈ ಬಗ್ಗೆ ಮಾತನಾಡಿದ ತನಿಷ್ಕ್, ‘ಇದು ಹಾಡಿನ ತಾಜಾ ವರ್ಷನ್. ಈ ಹಾಡನ್ನು ಕೇಳುವಾಗ, ನೈಜ್ಯ ಹಾಡು ಎಂಬ ಅನುಭವ ಕೊಡುತ್ತದೆ. ಶಬ್ಬೀರ್ ಅಹಮ್ಮದ್ ಹಾಡಿನ ಸಾಹಿತ್ಯ ಬರೆದಿದ್ದಾರೆ. ಸಾಹಿತ್ಯದ ಮೂಲಕಹಿಂದಿನಂತೆ ಈ ಹಾಡಿನಲ್ಲೂ ಲವಲವಿಕೆ ಜೀವಂತವಾಗಿದೆ’ ಎಂದಿದ್ದಾರೆ.

‘ಜವಾನಿ ಜಾನೇಮನ್’ ಚಿತ್ರಕ್ಕೆ ನಿತಿನ್ ಕಕ್ಕರ್ ನಿರ್ದೇಶನವಿದೆ. ಈ ಚಿತ್ರದ ಮೂಲಕ ಪೂಜಾ ಬೇಡಿ ಪುತ್ರಿ ಅಲಿಯಾ ಬಾಲಿವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕರೀನಾ ಕಪೂರ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಪೂಜಾ ಎಂಟರ್ಟೈನ್ಮೆಂಟ್, ಬ್ಲ್ಯಾಕ್ ನೈಟ್ ಫಿಲ್ಮ್, ನಾರ್ತನ್ ಲೈಟ್ ಫಿಲ್ಮ್ ಬಂಡವಾಳ ಹೂಡಿದೆ.

ಇದನ್ನೂ ಓದಿ:ನಟ ಸೈಫ್ ಆಲಿ ಖಾನ್ ವಿರುದ್ಧ ಆರೋಪ ಪಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.