ಮಂಗಳವಾರ, ಜನವರಿ 18, 2022
23 °C

‘ವಿಕ್ರಂ ವೇದಾ’: ಚಿತ್ರೀಕರಣ ಆರಂಭಿಸಿದ ಚಿತ್ರತಂಡ, ಸೈಫ್‌ ಆಲಿಖಾನ್‌ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: 2017ರಲ್ಲಿ ತೆರೆಕಂಡ ತಮಿಳು ಚಿತ್ರ ‘ವಿಕ್ರಂ ವೇದಾ’ ಹಿಂದಿ ಭಾಷೆಯಲ್ಲಿ ರಿಮೇಕ್ ಆಗುತ್ತಿದೆ. ನಟ ಹೃತಿಕ್ ರೋಷನ್, ಸೈಫ್‌ ಆಲಿಖಾನ್‌ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ.

ಯುಎಇಯ ಅಬುಧಾಬಿಯಲ್ಲಿ ವಿಕ್ರಂ ವೇದಾ ಚಿತ್ರೀಕರಣ ಈಗಾಗಲೇ ಮುಗಿದಿದೆ. ಈ ಸಂದರ್ಭದಲ್ಲಿ ಹೃತಿಕ್ ರೋಷನ್, ಚಿತ್ರತಂಡದ ಎಲ್ಲರಿಗೂ ಶೂ ಕೊಡಿಸಿ ಸುದ್ದಿಯಾಗಿದ್ದರು.

ಇದೀಗ ಚಿತ್ರತಂಡ ಉತ್ತರ ಪ್ರದೇಶದ ಲಖನೌದಲ್ಲಿ ಶೂಟಿಂಗ್‌ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಈ ವಾರದಲ್ಲಿ ನಟ ಸೈಫ್‌ ಆಲಿಖಾನ್‌ ಚಿತ್ರತಂಡ ಸೇರಲಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. 

ಪುಷ್ಕರ್‌ ಗಾಯತ್ರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ 2022ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಈ ಮೊದಲು, ಹೃತಿಕ್ ರೋಷನ್, ‘ವಾರ್’ ಮತ್ತು ‘ಸೂಪರ್ 30’ ಚಿತ್ರಗಳು ಯಶಸ್ವಿಯಾಗಿದ್ದವು. ಇತ್ತ ಸೈಫ್‌ ಅವರ ಆದಿಪುರುಷ್‌ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಇದರಲ್ಲಿ ಪ್ರಭಾಸ್‌ ನಾಯಕ ನಟರಾಗಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು