ಶನಿವಾರ, ಜನವರಿ 18, 2020
23 °C

ಫೆಬ್ರುವರಿಗೆ ಸಲಗ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುನಿಯಾ ವಿಜಯ್‌ ಮೊದಲ ಬಾರಿಗೆ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಸಲಗ’ ಚಿತ್ರದ ಶೂಟಿಂಗ್‌ ಮುಗಿದಿದೆ. ಡಬ್ಬಿಂಗ್‌ ಪೂರ್ಣಗೊಂಡಿದ್ದು, ಎಡಿಟಿಂಗ್‌ ಕೆಲಸವೂ ಅಂತಿಮ ಹಂತದಲ್ಲಿದೆ. ನಾಯಕನ ಎಂಟ್ರಿ ಸಾಂಗ್‌ವೊಂದನ್ನು ಮಾತ್ರ ಚಿತ್ರತಂಡ ಬಾಕಿ ಉಳಿಸಿಕೊಂಡಿದೆ. 

ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿರುವ ಈ ಸಿನಿಮಾವು ಕಥೆ ಮತ್ತು ಮೇಕಿಂಗ್‌ನಿಂದಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಅಮಾಯಕ ಕ್ರಿಮಿನಲ್‌ ಒಬ್ಬನ ಕಥೆ ಇದು. ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ಕಟು ಸತ್ಯ ಬಿಚ್ಚಿಡುವ ಹಂಬಲದಲ್ಲಿದ್ದಾರೆ ವಿಜಯ್‌. ಭೂಗತ ಲೋಕದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. 

‘ಡಾಲಿ’ ಖ್ಯಾತಿಯ ಧನಂಜಯ್‌ ಪೊಲೀಸ್‌ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಸಂಜನಾ ಆನಂದ್‌ ಇದರ ನಾಯಕಿ. ಜನವರಿ 5ರಂದು ‘ಸಲಗ’ದ ಆಡಿಯೊ ಬಿಡುಗಡೆ ಸಮಾರಂಭ ನಡೆಯಲಿದೆ. ನಟ ಶಿವರಾಜ್‌ಕುಮಾರ್ ಅವರು ಆಡಿಯೊ ಬಿಡುಗಡೆ ಮಾಡಲಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಕಳೆದ ವರ್ಷ ವಿಜಯ್‌ ನಟನೆಯ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಹಾಗಾಗಿ, ‘ಸಲಗ’ದ ಮೇಲೆ ನಿರೀಕ್ಷೆ ಹೆಚ್ಚಿದೆ. ಫೆಬ್ರುವರಿ ಅಂತ್ಯದಲ್ಲಿ ಥಿಯೇಟರ್‌ಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಪ್ರತಿಕ್ರಿಯಿಸಿ (+)