ಮಂಗಳವಾರ, ಜನವರಿ 25, 2022
25 °C

ವಿಕ್ಕಿ–ಕತ್ರೀನಾ ಮದುವೆ: ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಉಸ್ತುವಾರಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಭರದ ಸಿದ್ಧತೆ ನಡೆದಿದೆ.

ಬಾಲಿವುಡ್‌ನ ಈ ವರ್ಷದ ಕೊನೆಯ ಮತ್ತು ಅದ್ಧೂರಿ ವಿವಾಹ ಎಲ್ಲರ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ, ಕತ್ರೀನಾ–ವಿಕ್ಕಿ ಮದುವೆಗೆ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಶೇರಾ ಹೆಚ್ಚುವರಿ ಭದ್ರತೆ ಒದಗಿಸಲಿದ್ದಾರೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ.

ಡಿಸೆಂಬರ್ 9ರಂದು ಕತ್ರೀನಾ–ವಿಕ್ಕಿ ಮದುವೆ ನಡೆಯಲಿದೆ ಎನ್ನಲಾಗಿದೆ.

ಶೇರಾ ‘ಟೈಗರ್ ಸೆಕ್ಯುರಿಟಿ‘ ಹೆಸರಿನ ಭದ್ರತಾ ಕಂಪನಿಯನ್ನು ನಡೆಸುತ್ತಿದ್ದು, ಅವರ ಬೌನ್ಸರ್‌ಗಳು, ಬಾಡಿಗಾರ್ಡ್‌ಗಳು ವಿಕ್ಕಿ–ಕತ್ರೀನಾ ಮದುವೆಗೆ ವಿಶೇಷ ಭದ್ರತೆ ನೀಡಲಿದ್ದಾರೆ.

ಜತೆಗೆ ಸ್ಥಳೀಯಾಡಳಿತ ಮತ್ತು ಪೊಲೀಸ್ ಇಲಾಖೆ ಕೂಡ ಸೆಲೆಬ್ರಿಟಿ ಮದುವೆಗೆ ಭದ್ರತೆ ಒದಗಿಸಲಿದೆ.

ಶೇರಾ ಅವರು ಸಲ್ಮಾನ್ ಖಾನ್ ಅವರ ಆಪ್ತ ಮತ್ತು ಬಾಡಿಗಾರ್ಡ್ ಆಗಿ ಕಳೆದ 25 ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು