ಶುಕ್ರವಾರ, ಜನವರಿ 27, 2023
20 °C

1100 ಕಿಮೀ ಸೈಕಲ್ ತುಳಿದು ಸಲ್ಮಾನ್ ಖಾನ್‌ಗೆ ಬರ್ತಡೇ ವಿಶ್ ತಿಳಿಸಿದ ಅಭಿಮಾನಿ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಬರೋಬ್ಬರಿ 1,100 ಕಿ.ಮೀ ಸೈಕಲ್ ತುಳಿದು ಮುಂಬೈಗೆ ಬಂದಿದ್ದರು.

ಮಧ್ಯಪ್ರದೇಶದ ಜಬಲ್‌ಪುರದಿಂದ ಮುಂಬೈಗೆ ಸಮೀರ್ ಎನ್ನುವ ಅಭಿಮಾನಿಯೊಬ್ಬ ಸೈಕಲ್‌ನಲ್ಲಿ ಬಂದು ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ಅಭಿಮಾನಿ ಇನ್‌ಸ್ಟಾಗ್ರಾಂ ಪುಟವು ಈ ಚಿತ್ರವನ್ನು ಹಂಚಿಕೊಂಡಿದೆ.

ಡಿಸೆಂಬರ್ 27 ರಂದು ಸಲ್ಮಾನ್ ಖಾನ್ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಸಲ್ಮಾನ್ ಖಾನ್ ಕತ್ರಿನಾ ಕೈಫ್ ಜೊತೆ 'ಟೈಗರ್ 3' ಮತ್ತು ಪೂಜಾ ಹೆಗ್ಡೆ ಜೊತೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು