ಬುಧವಾರ, ಡಿಸೆಂಬರ್ 1, 2021
22 °C

ಸಹೋದರನ ಪುತ್ರ ನಿರ್ವಾನ್‌ ಖಾನ್‌ ಜೊತೆಗಿನ ಫೋಟೊ ಹಂಚಿಕೊಂಡ ಸಲ್ಮಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ರಷ್ಯಾದಲ್ಲಿ ನಡೆಯುತ್ತಿರುವ 'ಟೈಗರ್‌ 3' ಸಿನಿಮಾದ ಚಿತ್ರೀಕರಣವನ್ನು ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್‌ ಖಾನ್‌ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಅವರು ರಷ್ಯಾದಲ್ಲಿನ ತಮ್ಮ ಅಭಿಮಾನಿಗಳೊಂದಿಗೆ ತೆಗೆಸಿಕೊಳ್ಳುತ್ತಿರುವ ಸೆಲ್ಫಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಇವೆ.

ಸಲ್ಮಾನ್‌ ಸಹೋದರ ಸೊಹೈಲ್‌ ಖಾನ್‌ ಅವರ ಪುತ್ರ ನಿರ್ವಾನ್‌ ಖಾನ್‌ ಸಹ ರಷ್ಯಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ನಿರ್ವಾನ್‌ ಜೊತೆಗಿನ ಫೋಟೊವನ್ನು ಸಲ್ಮಾನ್‌ ಖಾನ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

'ಚಾಚಾ(ಚಿಕ್ಕಪ್ಪ), ಬತೀಜಾ(ಸಹೋದರನ ಮಗ)' ಎಂದು ಸಲ್ಮಾನ್‌ ಬರೆದುಕೊಂಡಿದ್ದು, ಚಿತ್ರವು ವೈರಲ್‌ ಆಗಿದೆ.

ಈಗಾಗಲೇ ಟೈಗರ್–3 ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಂಬೈನಲ್ಲಿ ಮುಕ್ತಾಯವಾಗಿದೆ. ಇದರಲ್ಲಿ ಕತ್ರಿನಾ ಕೂಡ ಭಾಗಿಯಾಗಿದ್ದರು.

ಇದೀಗ ರಷ್ಯಾ, ಆಸ್ಟ್ರೀಯ ಹಾಗೂ ಟರ್ಕಿಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್ 18ರಂದು ಪ್ರಯಾಣ ಬೆಳೆಸಿರುವ ಚಿತ್ರತಂಡ 45 ದಿನಗಳ ಕಾಲ ವಿದೇಶಗಳಲ್ಲಿ ತಂಗಲಿದೆ.

ಮನೀಶ್‌ ಶರ್ಮಾ ಟೈಗರ್‌–3 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲೂ ಸಲ್ಮಾನ್ ಮತ್ತು ಕತ್ರಿನಾ, ಟೈಗರ್ ಹಾಗೂ ಜೋಯಾ ಪಾತ್ರಗಳಲ್ಲಿ ಮುಂದುವರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು