ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್‌ ಖಾನ್‌ ಭಾವ ಆಯುಷ್‌ ಶರ್ಮಾ ಕಾರು ಅಪಘಾತ- ಚಾಲಕನಿಗೆ ಗಾಯ

Published 18 ಡಿಸೆಂಬರ್ 2023, 10:04 IST
Last Updated 18 ಡಿಸೆಂಬರ್ 2023, 10:04 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಆಯುಷ್‌ ಶರ್ಮಾ ಅವರಿಗೆ ಸೇರಿದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕನಿಗೆ ಗಾಯಗಳಾಗಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿಯನ್ನು ಪರ್ವಿಂದರ್‌ಜೀತ್ ಸಿಂಗ್( 35) ಎಂದು ಗುರುತಿಸಲಾಗಿದೆ.

ಪಾನಮತ್ತನಾಗಿದ್ದ ಸಿಂಗ್ ಬಾಂದ್ರಾ ಸಮೀಪ ನಟನ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕಾರಿನಲ್ಲಿ ನಟ ಆಯುಷ್‌ ಇರಲಿಲ್ಲ. ಬದಲಿಗೆ ಕಾರು ಚಲಾಯಿಸುತ್ತಿದ್ದ ಚಾಲಕ ಅರ್ಮಾನ್ ಹಸನ್ ಖಾನ್‌ಗೆ (31) ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆ ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಆಯುಷ್‌ ಶರ್ಮಾ ಅವರು ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಅವರ ತಂಗಿ ಅರ್ಪಿತಾ ಖಾನ್ ಅವರ ಗಂಡ.

ಚಾಲಕ ಹಸನ್ ಖಾನ್‌ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಯುಷ್‌ ಶರ್ಮಾ ಅವರು 2018ರಲ್ಲಿ ತೆರೆಕಂಡ ಲವ್‌ ಯಾತ್ರಿ ಸಿನಿಮಾದಿಂದ ಜನಪ್ರಿಯತೆ ಪಡೆದುಕೊಂಡರು. ಸಲ್ಮಾನ್‌ ಖಾನ್‌ ಅವರೊಟ್ಟಿಗೆ ಅಂತಿಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT