ಸಾಮಾನ್ಯವಾಗಿ ನಟಿಯರು ಮದುವೆಯಾದ ಮೇಲೆ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಜೊತೆಗೆ ನಟಿಸಿದರೂ ಆ ಸಿನಿಮಾಗಳು ಹಿಟ್ ಆಗುವುದು ಕಡಿಮೆ ಎಂಬ ನಂಬಿಕೆ ಇದೆ. ಆದರೆ ಈ ಎಲ್ಲಾ ಮಾತುಗಳಿಗೆ ನಟಿ ಸಮಂತಾ ಅಕ್ಕಿನೇನಿ ಅಪವಾದ.

ಮದುವೆಯಾದ ಮೇಲೂ ನಾಗಚೈತನ್ಯ ಹಾಗೂ ಸಮಂತಾ ‘ಮಜಲಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ನಂತರ ಇವರು ನಟಿಸಿದ ‘ಓ ಬೇಬಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. ಈಗ ತಮಿಳಿನ ‘96’ ಸಿನಿಮಾದ ತೆಲುಗು ರಿಮೇಕ್‌ನಲ್ಲೂ ಈ ಸುಂದರಿ ನಟಿಸುತ್ತಿದ್ದು ಮುಂದೆ ನೆಗೆಟಿವ್ ಪಾತ್ರದಲ್ಲಿ ನಟಿಸುವ ಸುಳಿವು ನೀಡಿದ್ದಾರೆ.

ಸಮಂತಾ ಸದಾ ವಿಭಿನ್ನವಾದ ಪಾತ್ರ ಹಾಗೂ ಚಿತ್ರಕಥೆಯುಳ್ಳ ಸಿನಿಮಾಗಳಲ್ಲಿ ನಟಿಸುತ್ತಾರೆ. ಪ್ರತಿ ಪಾತ್ರದಲ್ಲೂ ಭಿನ್ನತೆ ಹುಡುಕುವ ಅವರು ಜನ ಮೆಚ್ಚುಗೆ ಗಳಿಸುತ್ತಾರೆ.

ತಮಿಳಿನ ‘ಸೂಪರ್ ಡಿಲಕ್ಸ್’ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಾಗರ್ಜುನ ಸೊಸೆ ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್‌ನಲ್ಲೂ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತಿದೆ.

ಸದ್ಯದಲ್ಲೇ ಅವರು ಮನೋಜ್ ಬಾಜಪೇಯಿ ಹಾಗೂ ಪ್ರಿಯಾಮಣಿ ಜೊತೆ ವೆಬ್ ಸೀರಿಸ್ ಶೂಟಿಂಗ್ ನಡೆಸಲಿದ್ದಾರೆ. ಇದರಲ್ಲಿ ಆಕೆ ಪಾಕಿಸ್ತಾನದಲ್ಲಿನ ಭಾರತದ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ಸಮಂತಾ, ಶರ್ವಾನಂದ್ ಜೋಡಿಯ ‘96’

ಆದರೆ ಟ್ವಿಸ್ಟ್ ಎಂದರೆ ಇದರಲ್ಲಿ ನೆಗೆಟಿವ್ ಪಾತ್ರದಲ್ಲಿ ನಿರ್ವಹಿಸಲಿದ್ದಾರೆ ಅವರು. ವೆಬ್ ಸೀರಿಸ್ ಏಜೆಂಟ್ ಪಾತ್ರಕ್ಕೆ ಚಪ್ಪಾಳೆ ದಕ್ಕಿದರೆ ಮತ್ತೆ ಮತ್ತೆ ಇಂತಹ ಪಾತ್ರಗಳು ಅವರನ್ನು ಹುಡುಕಿಕೊಂಡು ಬರುವ ನಿರೀಕ್ಷೆ ಇದೆ.
ಸಮಂತಾ ಈ ಸಿನಿಮಾಕ್ಕಾಗಿ ತೂಕ ತರಬೇತಿ ಹಾಗೂ ಪಾರ್ಕರ್ ಸಾಹಸಗಳನ್ನು ಕಲಿಯುತ್ತಿದ್ದು ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಶೂಟಿಂಗ್ ಮುಗಿದ ಮೇಲೆ ತಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.