ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ನಟಿಸಿದ ಕೊನೆಯ ಚಿತ್ರ ‘ಜಾನು’. ಇದು ತಮಿಳಿನ ‘96’ ಚಿತ್ರದ ತೆಲುಗು ರಿಮೇಕ್. ಇದರಲ್ಲಿನ ಆಕೆಯ ನಟನೆಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೋಟಿ ಮೊತ್ತದ ಸಂಭಾವನೆ ಪಡೆಯುವ ನಟಿಯರ ಪೈಕಿ ಸಮಂತಾ ಕೂಡ ಒಬ್ಬರು. ಆಕೆ ಸಿನಿಮಾವೊಂದಕ್ಕೆ ನಿಗದಿಪಡಿಸುವ ಸಂಭಾವನೆಯ ಮೊತ್ತ ಬರೋಬ್ಬರಿ ₹ 1 ಕೋಟಿಯಂತೆ. ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯೆಂದರೆ ಕಾಲಿವುಡ್‌ನ ನಯನತಾರಾ. ಆಕೆ ಚಿತ್ರವೊಂದಕ್ಕೆ ₹ 5 ಕೋಟಿ ಸಂಭಾವನೆ ಪಡೆಯುತ್ತಾರೆ.

ಕೋವಿಡ್–19 ಪರಿಣಾಮ ಚಿತ್ರೋದ್ಯಮದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದೆ. ನಿರ್ಮಾಪಕರು ದೊಡ್ಡ ಮೊತ್ತದ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ, ಬಂಡವಾಳ ಹೂಡಿರುವವರು ಸಿನಿಮಾ ಬಿಡುಗಡೆಯಾಗದಿರುವ ಪರಿಣಾಮ ಸಂಕಷ್ಟದ ದಿನಗಳನ್ನು ದೂಡುತ್ತಿದ್ದಾರೆ. ಆದರೆ, ಸಮಂತಾ ತನ್ನ ಸಂಭಾವನೆಯ ಮೊತ್ತವನ್ನು ದಿಢೀರ್ ಆಗಿ ₹ 3.50 ಕೋಟಿಗೆ ಹೆಚ್ಚಿಸಿಕೊಂಡು ನಿರ್ಮಾಪಕರಿಗೆ ಬಿಗ್ ಶಾಕ್ ನೀಡಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿರುವ ಆಕೆಯ ಮನೆಗೆ ನಿರ್ಮಾಪಕರೊಬ್ಬರು ಹೊಸ ಸಿನಿಮಾ ಕುರಿತು ಚರ್ಚಿಸಲು ಹೋಗಿದ್ದರಂತೆ. ಕಥೆಯನ್ನು ನಿರೂಪಿಸಿದ ಅವರು ಈ ಸಿನಿಮಾದಲ್ಲಿ ನಟಿಸಲು ಮನವಿ ಮಾಡಿದ್ದಾರೆ. ಆದರೆ, ಆಕೆ ಮುಂದಿಟ್ಟ ಸಂಭಾವನೆಯ ಮೊತ್ತ ಕೇಳಿ ಅವರು ಹೌಹಾರಿದ್ದಾರೆ. ಕೊನೆಗೆ, ಸಿನಿಮಾ ಒಳ್ಳೆಯ ಆದಾಯ ಗಳಿಸಿದರೆ ನೀವು ಕೇಳಿದಷ್ಟು ಮೊತ್ತ ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಆದರೆ, ಅದಕ್ಕೆ ಸಮಂತಾ ಅಪ್ಪಿತಪ್ಪಿಯೂ ಒಪ್ಪಿಕೊಳ್ಳಲಿಲ್ಲವಂತೆ. ‘ಮುಂಗಡವಾಗಿ ಪೇ ಚೆಕ್ ನೀಡಿ’ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ.

ಮತ್ತೊಂದೆಡೆ ಆಕೆಗೆ ಕಥೆ ಒಪ್ಪಿಗೆಯಾಗದಿರುವ ಪರಿಣಾಮ ದೊಡ್ಡ ಮೊತ್ತದ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿಯೂ ಇದೆ. ಕೊರೊನಾ ಕಾಲದಲ್ಲಿ ಆಕೆ ಪತಿ ನಾಗಚೈತನ್ಯ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಶ್ರೀದೇವಿ ಜಸ್ತಿ ಅವರಿಂದ ಅಡುಗೆ ಮಾಡುವುದನ್ನು ಕಲಿಯುತ್ತಿದ್ದಾರೆ. ಬಾಲಿವುಡ್ ನಟ ಮನೋಜ್ ಬಾಜಪೇಯಿ ಪ್ರಧಾನಪಾತ್ರದಲ್ಲಿ ನಟಿಸಿರುವ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲೂ ಸಮಂತಾ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.