ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಫೋಟೊ ಹಂಚಿಕೊಂಡ ಸಮಂತಾ: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

Last Updated 5 ಏಪ್ರಿಲ್ 2022, 9:23 IST
ಅಕ್ಷರ ಗಾತ್ರ

ಹೈದರಾಬಾದ್: ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಸಮಂತಾ, ಪ್ರವಾಸ, ಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಹಳದಿ ಬಣ್ಣ ಉಡುಪು ಧರಿಸಿ, ಗಾಢ ಅಲೋಚನೆಯಲ್ಲಿರುವಂತಹ ನೋಟ ಬೀರಿರುವ ಫೋಟೊವನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೇಸಿಗೆ ಕಾಲವಾದ್ದರಿಂದ ತೆಳ್ಳಗಿನ ಉಡುಪು ಧರಿಸಿರುವ ಅವರು ಸೂರ್ಯಕಾಂತಿ ಎಮೋಜಿಯೊಂದಿಗೆ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರಕ್ಕೆ ಸಮಂತಾ ಅವರ ವಿಚ್ಛೇದಿತ ಪತಿ ನಾಗ ಚೈತನ್ಯ ಅವರ ಸೋದರ ಸಂಬಂಧಿ ಆಶ್ರಿತಾ ದಗ್ಗುಬಾಟಿ ಕೂಡ ಹೃದಯ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ.

ಸಮಂತಾಗೆ ದೊಡ್ಡ ಅಭಿಮಾನಿ ಬಳಗವಿದೆ. ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡುವ ಅವರು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚಿಗೆ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ, ‘ಹೂ ಅಂತಿಯಾ ಮಾವ.. ಊ ಊ ಅಂತಿಯಾ’ ಹಾಡಿಗೆ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದರು.

ಗುಣಶೇಖರ್ ನಿರ್ದೇಶನದ ‘ಶಾಕುಂತಲಂ’ ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ, ಫಿಲಿಪ್‌ ಜಾನ್‌ ನಿರ್ದೇಶನದ ‘ಅರೆಂಜ್‌ಮೆಂಟ್ಸ್‌ ಆಫ್ ಲವ್’ ಎಂಬ ಹಾಲಿವುಡ್‌ ಚಿತ್ರದಲ್ಲಿ ಸಮಂತಾ ಅಭಿನಯಿಸಲಿದ್ದಾರೆ.

ಇವನ್ನೂ ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT