ಪುಷ್ಪ ಸಿನಿಮಾಕ್ಕಾಗಿ ಐಟಂ ಸಾಂಗ್ ಚಿತ್ರೀಕರಣ ಆರಂಭಿಸಿದ ಸಮಂತಾ

ಬೆಂಗಳೂರು: ನಟ ನಾಗ ಚೈತನ್ಯ ಜತೆಗಿನ ಮದುವೆ ಮುರಿದು ವಿಚ್ಛೇದನ ಪಡೆದುಕೊಂಡಿರುವ ನಟಿ ಸಮಂತಾ ರುತ್ ಪ್ರಭು, ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ.
ಅಲ್ಲು ಅರ್ಜುನ್ ನಾಯಕ ನಟನಾಗಿರುವ 'ಪುಷ್ಪ' ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸಮಂತಾ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.!
ರಾಮೋಜಿ ಫಿಲಂ ಸಿಟಿಯಲ್ಲಿ ಐಟಂ ಸಾಂಗ್ ದೃಶ್ಯಗಳ ಚಿತ್ರೀಕರಣ ಆರಂಭವಾಗಿದೆ ಎನ್ನಲಾಗಿದೆ. ಬಾಲಿವುಡ್‌ನ ಗಣೇಶ್ ಆಚಾರ್ಯ ಅವರು ಕೊರಿಯೋಗ್ರಫಿ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಸಮಂತಾ ಜತೆ ವಿಚ್ಛೇದನದ ಬಳಿಕ ಮತ್ತೆ ಸಾಮಾಜಿಕ ತಾಣಕ್ಕೆ ಮರಳಿದ ನಾಗ ಚೈತನ್ಯ
ಪುಷ್ಪದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಪಾತ್ರದಲ್ಲಿದ್ದಾರೆ. ಜತೆಗೆ ಮಲಯಾಳಂ ನಟ ಫಹಾದ್ ಫಾಸಿಲ್, ನಟ ಡಾಲಿ ಧನಂಜಯ ಮತ್ತು ತೆಲುಗು ಕಮಿಡಿಯನ್ ಸುನಿಲ್ ಕೂಡ ಪುಷ್ಪ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ.
ವಿಚ್ಛೇದನದ ಬಳಿಕ ಹಾಲಿವುಡ್ಗೆ ತೆರಳಿದ ಸಮಂತಾ ರುತ್ ಪ್ರಭು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.